ಇರಾನ್: ಮತ್ತೆ 123 ಸಾವು

Update: 2020-03-21 17:54 GMT

ಟೆಹರಾನ್ (ಇರಾನ್), ಮಾ. 21: ಇರಾನ್‌ನಲ್ಲಿ ಒಂದು ದಿನದ ಅವಧಿಯಲ್ಲಿ ಕೊರೋನವೈರಸ್‌ಗೆ 123 ಮಂದಿ ಬಲಿಯಾಗಿದ್ದಾರೆ ಎಂದು ಆ ದೇಶ ಶನಿವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ಮಾರಕ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ 1,556ಕ್ಕೆ ಏರಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 966 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ದೇಶದ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಇದರೊಂದಿಗೆ ಇರಾನ್‌ನಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 20,610ಕ್ಕೆ ಏರಿದೆ.

ಈವರೆಗೆ ರೋಗದಿಂದ 7,635 ಮಂದಿ ಗುಣಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News