ಕಾರ್ಕಳದ ಶನಿವಾರ ಸಂತೆ ರದ್ದು
Update: 2020-03-21 23:27 IST
ಕಾರ್ಕಳ, ಮಾ.21:ಕೊರೊನ ವೈರಸ್ ಭೀತಿಯಿಂದಾಗಿ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿ ಶನಿವಾರದ ಸಂತೆ ರದ್ದುಗೊಂಡಿದ್ದು ಜನಸಂಚಾರ ವಿರಳವಾಗಿತ್ತು.
ಪ್ರತೀ ಶನಿವಾರ ಜನರಿಂದ ತುಂಬಿರುತ್ತಿದ್ದ ಮಾರುಕಟ್ಟೆ ಪರಿಸರದಲ್ಲಿ ಕೇವಲ ಬೆರಳಣಿಕೆಯಷ್ಟು ಜನರು ಮಾತ್ರ ಕಂಡುಬಂದರು. ಮಾರುಕಟ್ಟೆ ಸಂಕೀರ್ಣದ ಮುಖ್ಯ ದ್ವಾರದ ಗೇಟು ಮುಚ್ಚಲಾಗಿತ್ತು. ಅಂಗಡಿಗಳು ಎಂದಿನಂತೆ ತೆರೆದು ಕೊಂಡಿದ್ದು ಜನರಿಲ್ಲದೆ ಅಂಗಡಿ ಮಾಲಿರು ಸಾಕಷ್ಟು ಅನುಭವಿಸುತ್ತಿದ್ದಾರೆ.