ಅಫ್ಘಾನ್: ಸೇನಾ ನೆಲೆ ಮೇಲೆ ಭೀಕರ ದಾಳಿ; 27 ಭದ್ರತಾ ಸಿಬ್ಬಂದಿ ಸಾವು

Update: 2020-03-21 18:01 GMT

ಕಾಬೂಲ್ (ಅಫ್ಘಾನಿಸ್ತಾನ), ಮಾ. 21: ಅಫ್ಘಾನಿಸ್ತಾನದಲ್ಲಿ ಸೇನಾ ನೆಲೆಯೊಂದರ ಮೇಲೆ ಗುರುವಾರ ನಡೆದ ದಾಳಿಯಲ್ಲಿ ಕನಿಷ್ಠ 27 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್ ನಡುವೆ ಕಳೆದ ತಿಂಗಳು ಶಾಂತಿ ಒಪ್ಪಂದವೊಂದು ಏರ್ಪಟ್ಟ ಬಳಿಕ, ಅಫ್ಘಾನಿಸ್ತಾನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ದಾಳಿ ನಡೆದಿರುವುದು ಇದೇ ಮೊದಲ ಬಾರಿಯಾಗಿದೆ.

ದಾಳಿಯ ಹೊಣೆಯನ್ನು ಯಾರೂ ಹೊತ್ತಿಲ್ಲವಾದರೂ, ದಾಳಿ ನಡೆಸಿದ್ದು ತಾಲಿಬಾನ್ ಎಂದು ಅಫ್ಘಾನಿಸ್ತಾನ ಸರಕಾರ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News