×
Ad

ಕಾರ್ಕಳ: ಕೊರೋನ ಶಂಕಿತ ಆಸ್ಪತ್ರೆ ದಾಖಲು

Update: 2020-03-22 18:31 IST

ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ಣು‌ ಸಚ್ಚರಿಪೇಟೆಯ ಸಮೀಪದ 29 ವರ್ಷದ ಯುವಕನೋರ್ವನಿಗೆ ಕರೋನಾ ವೈರಸ್ ಇರುವ ಬಗ್ಗೆ ಶಂಕಿಸಲಾಗಿದ್ದು. ಕೊರೋನ ಶಂಕಿತನನ್ನು ಶನಿವಾರ ಕಾರ್ಕಳ ಸರಕಾರಿ ಆಸ್ಪತ್ರೆಯ ಐಸೋಲೇಶನ್ ವಾಡ್೯ಗೆ ಶಿಫ್ಟ್ ಮಾಡಲಾಗಿದೆ.

ತಾಲೂಕಿನ ಬೆಳ್ಮಣ್ಣು ಸಂಕಲಕರಿಯ ಸಮೀಪದ ನಿವಾಸಿ, ದುಬೈಯಿಂದ ಕಳೆದ ಮಾ.18 ರಂದು ಊರಿಗೆ ಅಗಮಿಸಿದ್ದರು. ಬಳಿಕ ಅವರಿಗೆ ವಿಪರೀತ ಕೆಮ್ಮು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಪ್ರಾಥಮಿಕ ಅರೋಗ್ಯ ಕೇಂದ್ರ ತುರ್ತು ಚಿಕಿತ್ಸಾ ವಾಹನದ ಮೂಲಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಇದೀಗ ಸರಕಾರಿ ಆಸ್ಪತ್ರೆಯ ಐಸೋಲೇಶನ್ ವಾಡ್೯ ನಲ್ಲಿ ದಾಖಲಿಸಿ ಕೋರೋನಾ ಸೋಂಕಿನ ‌ಗುಣ ಲಕ್ಷಣಗಳಿರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಈ ಹಿಂದೆಯೋ‌ ಅತನಿಗೆ ಕೆಮ್ಮು ಇರುವುದಾಗಿ ತಿಳಿಸಿದ್ದಾರೆ.

ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದು, ಶಂಕಿತನ ಮೂಗಿನ ಹಾಗೂ ಗಂಟಲಿನ ಸ್ಯಾಪ್ ಮಾದರಿ ಪಡೆದು ಪರೀಕ್ಷೆಗಾಗಿ‌ ಪ್ರಯೋಗಾಲಯಕ್ಕೆ ಕಳುಹಿಸಿದ ಬಳಿಕವೇ ಖಚಿತವಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News