ಕಾಸರಗೋಡಿನಲ್ಲಿ ಮುಂದುವರಿದ ಕೊರೋನ ಅಟ್ಟಹಾಸ: ಮತ್ತೆ ಐವರಲ್ಲಿ ಸೋಂಕು ದೃಢ

Update: 2020-03-22 14:12 GMT
ಸಾಂದರ್ಭಿಕ ಚಿತ್ರ

ಕಾಸರಗೋಡು, ಮಾ.22: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ಅಟ್ಟಹಾಸ ಮುಂದುವರಿದಿದ್ದು, ರವಿವಾರ ಮತ್ತೆ ಐವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಒಟ್ಟು 17 ಪ್ರಕರಣಗಳು ಕಾಸರಗೋಡು ಜಿಲ್ಲೆಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 19ಕ್ಕೇರಿದೆ. ಕೇರಳದಲ್ಲಿ ಇಂದು ಒಟ್ಟು 15 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 64 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕಾಸರಗೋಡು ಜಿಲ್ಲೆಯಲ್ಲಿ ಇಂದು ಸೋಂಕು ಪತ್ತೆಯಾದವರು ದುಬೈಯಿಂದ ಬಂದವರಾಗಿದ್ದು ನೆಲ್ಲಿಕುಂಜೆ, ವಿದ್ಯಾನಗರ, ಚಂದ್ರಗಿರಿ, ಮರಕೋಪ್ ಕಡಪ್ಪುರ ಹಾಗೂ ಚೆಂಗಳ ನಿವಾಸಿಗಳಾಗಿದ್ದು, ಎಲ್ಲರೂ ಪುರುಷರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಜಿಲ್ಲೆಯಲ್ಲಿ 762 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 41 ಮಂದಿ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಜಿಲ್ಲಾ, ಜನರಲ್ ಮತ್ತು ಖಾಸಗಿ ಆಸ್ಪತ್ರೆ ಮಾತ್ರವಲ್ಲದೆ ಎರಡು ಪ್ರತ್ಯೇಕ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News