×
Ad

ಕಾಸರಗೋಡಿನಲ್ಲಿ ಸೆಕ್ಷನ್ 144 ಜಾರಿ: ಖಾಸಗಿ ಬಸ್ಸು ಸಂಚಾರ ಸ್ಥಗಿತ

Update: 2020-03-22 22:09 IST

ಕಾಸರಗೋಡು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟು ನಿಟ್ಟನಿಟ್ಟಿನ ನಿಯಂತ್ರಣ ಗಳನ್ನು ಜಾರಿಗೆ ತಂದಿದ್ದು, ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮಕ್ಕೆ ಆದೇಶ ನೀಡಿದೆ.

ಇಂದು (ರವಿವಾರ) ರಾತ್ರಿ 9 ಗಂಟೆಯಿಂದ ಜಾರಿಗೆ ಬರುವಂತೆ  ಜಿಲ್ಲೆಯಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆಯನ್ನು ಜಾರಿಗೆ ತರಲಾಗಿದೆ .

ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಯನ್ನು ನಿಷೇಧಿಸಲಾಗಿದೆ. ಖಾಸಗಿ ಬಸ್ಸು ಸಂಚಾರ ಸಂಪೂರ್ಣ ರದ್ದುಗೊಳಿಸಲಾಗಿದೆ .
ಕಾಸರಗೋಡು ಸಂಪರ್ಕದ ಅಂತರ್ ಜಿಲ್ಲಾ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.  ಜನರು ಮನೆಯಲ್ಲೇ ಇರುವಂತೆ ಆದೇಶ ನೀಡಲಾಗಿದೆ .
ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಗತ್ಯ ವಾಹನ ಹೊರತು ಪಡಿಸಿ ಉಳಿದೆಲ್ಲಾ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅಗತ್ಯ ವ್ಯಾಪಾರ ಮಳಿಗೆ ಮಾತ್ರ ತೆರೆಯಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಐದು ಮಂದಿಗಿಂತ ಹೆಚ್ಚು ಗುಂಪು ಗೂಡುವಂತಿಲ್ಲ. ಆರಾಧನಾಲಯ, ಧಾರ್ಮಿಕ ಕೇಂದ್ರ, ಕ್ಲಬ್, ಸಿನಿಮಾ ಥಿಯೇಟರ್, ಪಾರ್ಕ್, ಬೀಚ್ ಹಾಗೂ ಇನ್ನಿತರ ಪ್ರವಾಸಿ ಕೇಂದ್ರಗಳು ಕಾರ್ಯಾಚರಿಸುವಂತಿಲ್ಲ.

ವ್ಯಾಪಾರ ಮಳಿಗೆಗಳು ಬೆಳಿಗ್ಗೆ 11 ರಿಂದ 5 ಗಂಟೆ ತನಕ ಕಾರ್ಯಾಚರಿಸಲು ಅವಕಾಶ, ಹಾಲು ಮಾರಾಟ ಬೂತ್, ಪೆಟ್ರೋಲ್ ಪಂಪ್, ಮೆಡಿಕಲ್ ಸ್ಟೋರ್, ಪಡಿತರ ಅಂಗಡಿ, ಆಹಾರ ಸಾಮಾಗ್ರಿ ಮಳಿಗೆಗಳು ಕಾರ್ಯಾಚರಿಸಲು ಅವಕಾಶವಿದೆ.

ಸೋಂಕು ಹರಡುವ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ನಾಗರಿಕರು ಕೆಲ ದಿನಗಳ ಕಾಲ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News