×
Ad

ಬಡ ಕುಟುಂಬಗಳಿಗೆ ನೆರವಾಗುವಂತೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಕರೆ

Update: 2020-03-22 23:42 IST

ಉಡುಪಿ, ಮಾ.22: ಕೊರೋನ ವೈರಸ್ ಭೀತಿಯಿಂದ ಆರೋಗ್ಯ ಇಲಾಖೆ ಯವರು ಹೊರಡಿಸಿದ ಆದೇಶದಂತೆ ಅಂಗಡಿ, ಮಾಲ್ ಗಳು ಬಂದ್ ಆಗಿರುವುದರಿಂದ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವುದು ಗಮನಕ್ಕೆ ಬರುತ್ತಿದ್ದು, ಅಂತಹ ಕುಟುಂಬಗಳಿಗೆ ಸಹಾಯ ಮಾಡುವಂತೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಕರೆ ನೀಡಿದೆ.

ಜಿಲ್ಲೆಯ ಪ್ರತೀ ಜಮಾಅತ್ ಕಮಿಟಿ, ಸಂಘ ಸಂಸ್ಥೆಗಳು ಈ ಬಗ್ಗೆ ಅರಿತು ಬಡ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಾಗ್ರಿಗಳನ್ನು ನೀಡಿ ಅವರ ಕಣ್ಣೀರು ಒರೆಸಲು ಕೆಲಸ ಮಾಡಬೇಕು. ಸಂಯುಕ್ತ ಜಮಾಅತ್, ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಂಎ ಹಾಗೂ ಎಸ್ಸೆಸ್ಸೆಫ್ನ ನಾಯಕರು ಹಾಗೂ ಕಾರ್ಯಕರ್ತರು ಈ ಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಹಾಗೂ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News