ಉಡುಪಿ: ಸೇನಾ ನೇಮಕಾತಿ ರ್ಯಾಲಿ ಮುಂದೂಡಿಕೆ
Update: 2020-03-23 20:18 IST
ಉಡುಪಿ, ಮಾ.23: ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಎ.4ರಿಂದ 14ರ ವರೆಗೆ ಜರುಗಲಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಕಾರಣಾಂತರಗಳಿಂದ ಜನವರಿ 2021ಕ್ಕೆ ಮುಂದೂಡಲಾಗಿದೆ.
ನೇಮಕಾತಿ ರ್ಯಾಲಿಗೆ ಈಗಾಗಲೇ ತಮ್ಮ ಹೆಸರುಗಳನ್ನು ನೊಂದಾಯಿಸಿ ರುವವರು ಮತ್ತೊಮ್ಮೆ ನೊಂದಾಯಿಸುವ ಅವಶ್ಯಕತೆ ಇರುವುದಿಲ್ಲ. ಈ ರೀತಿ ಮುಂದೂಡಿದ ನೇಮಕಾತಿ ರ್ಯಾಲಿಗೆ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ಜನವರಿ 2021ರ ನೇಮಕಾತಿ ರ್ಯಾಲಿಗೆ ಅರ್ಹರಿರುತ್ತಾರೆ ಎಂದು ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.