ಕೊರೊನಾ ಜನಜಾಗೃತಿ: 5000 ಮಾಸ್ಕ್ ವಿತರಣೆ
Update: 2020-03-23 20:20 IST
ಉಡುಪಿ, ಮಾ.23: ಕೊರೊನಾ ವೈರಸ್ ಕುರಿತ ಜನಜಾಗೃತಿ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಸುಮಾರು 5,000 ಮಾಸ್ಕ್ ಹಾಗೂ ಮಾಹಿತಿ ಪತ್ರಗಳನ್ನು ಸಂಘದ ಆವರಣದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ನಾಗರತ್ನ, ಉಡುಪಿ ಲಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್, ಸಂಘದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಂಘದ ಸಿಬ್ಬಂದಿಗಳು, ಎಲ್‌ಎಂಎಚ್ ಸಿಬ್ಬಂದಿ ಉಪಸ್ಥಿತರಿದ್ದರು.