ಕೊರೋನ ವೈರಸ್ ಭೀತಿ: ತುರ್ತು ಪ್ರಕರಣಗಳು ಮಾತ್ರ ವಿಚಾರಣೆ: ನ್ಯಾ. ಕಡ್ಲೂರು
Update: 2020-03-23 20:34 IST
ಮಂಗಳೂರು, ಮಾ.23: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ನ್ಯಾಯಾಲಯಗಳಲ್ಲಿ ತುರ್ತು ಪ್ರಕರಣಗಳನ್ನ್ನು ಮಾತ್ರ ವಿಚಾರಣೆಗಳನ್ನು ಸೋಮವಾರ ಕೈಗೆತ್ತಿಕೊಳ್ಳಲಾಯಿತು. ಈ ಬಗ್ಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸತ್ಯನಾರಾಯಣ ಆಚಾರ್ಯ ಪ್ರತಿಕ್ರಿಯಿಸಿ ತುರ್ತು ವಿಚಾರಣೆಗಳನ್ನು ಉಭಯ ವಕೀಲರ ಸಮ್ಮತಿಯ ಮೇರೆಗೆ ಅಗತ್ಯವಿದ್ದಲ್ಲಿ ಮಾತ್ರ ಅಂತಹ ಕೇಸುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಯಾವುದೇ ವಕೀಲರು ಅಥವಾ ಕಕ್ಷಿದಾರು ಆತಂಕಪಡುವ ಅಗತ್ಯವಿಲ್ಲ. ಕ್ರಿಮಿನಲ್ ದಾವೆಗಳಲ್ಲೂ ಕೂಡ ಕಕ್ಷಿದಾರರು ವಕೀಲರೊಂದಿಗೆ ಬಂದರೆ ಮಾತ್ರ ನ್ಯಾಯಾಲಯದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ಉಳಿದಂತೆ ಯಾವುದೇ ಪ್ರಕರಣಗಳಿಗೆ ಮುಂದಿನ ವಾಯ್ದೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.