×
Ad

ಕೊರೋನ ವೈರಸ್ ಹಿನ್ನೆಲೆ: ಮೊಬೈಲ್ ಸಂಖ್ಯೆ ಬಳಸಿ ಪಡಿತರ ಪಡೆಯಲು ವ್ಯವಸ್ಥೆ

Update: 2020-03-23 21:19 IST
ಸಾಂದರ್ಭಿಕ ಚಿತ್ರ

ಮಂಗಳೂರು, ಮಾ.23: ಕೊರೋನ ಸೋಂಕು ಹರಡದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸ್ತುತ ಬೆರಳಚ್ಚು ಬಯೋಮೆಟ್ರಿಕ್ ನೀಡಿ ಪಡಿತರ ಬದಲು ಪರ್ಯಾಯವಾಗಿ ಆಧಾರ್ ನೋಂದಾಯಿತ ಮೊಬೈಲ್ ಬಳಸಿ ಒಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪಡಿತರ ಚೀಟಿದಾರರು ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಲ್ಲದಿರುವುದು ಕಂಡು ಬಂದಿರುವುದರಿಂದ ಆಧಾರ್ ನೋಂದಣಿ ಆಗದ ಮೊಬೈಲ್ ಸಂಖ್ಯೆ ಬಳಸಿ ಒಟಿಪಿ ಮೂಲಕ ಪಡಿತರ ಪಡೆಯುವ ವ್ಯವಸ್ಥೆಯನ್ನು ಈಗ ಕಲ್ಪಿಸಲಾಗಿದೆ.

ಈ ಪ್ರಯೋಜನವನ್ನು ಪಡಿತರ ಚೀಟಿದಾರರು ಪಡೆದುಕೊಳ್ಳಲು ದ.ಕ. ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News