×
Ad

ಆಹಾರ ಸಾಮಗ್ರಿ ಪೂರೈಕೆಗೆ ಮುಸ್ಲಿಂ ಜಮಾಅತ್ ಕರೆ

Update: 2020-03-23 21:53 IST

ಮಂಗಳೂರು, ಮಾ.23: ರಾಜ್ಯದ 9 ಜಿಲ್ಲೆಗಳಲ್ಲಿ ‘ಶಟ್‌ಡೌನ್’ ಆಗಿರುವುದರಿಂದ ಹೆಚ್ಚಿನ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಿವೆ. ಈ ಸಂದರ್ಭ ದಿನಗೂಲಿ ಕಾರ್ಮಿಕರು, ಗೂಡಂಗಡಿ, ಫುಟ್ಪಾತ್ ಮುಂತಾದ ಚಿಕ್ಕಪುಟ್ಟ ವ್ಯಾಪಾರಸ್ಥರ ಕುಟುಂಬಗಳಲ್ಲಿ ದಿನನಿತ್ಯದ ಆಹಾರ ಸಾಮಗ್ರಿಗಳ ಕೊರತೆ ಸಂಭವಿಸುವ ಸಾಧ್ಯತೆ ಇರುವುದರಿಂದ ಎಲ್ಲಾ ಜಮಾಅತ್ ಸಮಿತಿಗಳು ಇಂತಹ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮನವಿ ಮಾಡಿದೆ.

ಸುನ್ನಿ ಯುವ ಜನ ಸಂಘ ಕರೆ

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಬೀಗಮುದ್ರೆ (ಲಾಕ್‌ಡೌನ್) ಹಾಕಿರುವುದರಿಂದ ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಎಸ್‌ವೈಎಸ್‌ನ ಪ್ರತಿ ಸೆಂಟರ್ ಸಮಿತಿಗಳು ಸಂಕಷ್ಟ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ನೆರವಾಗಬೇಕು ಎಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಪಿಎಂ ಉಸ್ಮಾನ್ ಸಅದಿ ಪಟ್ಟೋರಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News