ಕೊರೋನ ವೈರಸ್‌: ಬಜ್ಪೆ ಜಂಕ್ಷನ್‌ನಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್, ಸೋಪು ವಾಟರ್ ಅಳವಡಿಕೆ

Update: 2020-03-23 16:25 GMT

ಬಜ್ಪೆ, ಮಾ.23: ಕೊರೋನ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಬಜ್ಪೆ ಗ್ರಾಪಂ ಆಡಳಿತವು ಸಾರ್ವಜನಿಕ ಹಿತಾಸಕ್ತಿಯಿಂದ ಬಜ್ಪೆಜಂಕ್ಷನ್‌ನಲ್ಲಿ ಬೃಹತ್ ನೀರಿನ ಟ್ಯಾಂಕ್ ಅಳವಡಿಸಿ ಸಾರ್ವಜನಿಕರಿಗೆ ಕೈ ತೊಳೆಯಲು ಬೇಸಿನ್ ಹಾಗೂ ಸೋಪು ವಾಟರ್ ವ್ಯವಸ್ಥೆ ಮಾಡಿದೆ.

ಶನಿವಾರ ಬೆಳಗ್ಗಿನಿಂದ ಆರಂಭಗೊಂಡ ಈ ವ್ಯವಸ್ಥೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ತಿಳಿದು ಬಂದಿದೆ.

‘ಕೊರೋನ ವೈರಸ್‌ನಿಂದ ಮುಕ್ತಿ ಪಡೆಯಲು ಆಗಾಗ್ಗೆ ಸೋಪು ವಾಟರ್ ಅಥವಾ ಸ್ಯಾನಿಟೈಸರ್ ಬಳಸಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲೂ ಸುಲಭವಾಗಿ ಇವೆಲ್ಲ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಬಜ್ಪೆಜಂಕ್ಷನ್‌ನಲ್ಲಿ ಒಂದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅಳವಡಿಸಿದೆ. ಸೋಂಕು ತಗುಲದಂತೆ ಎಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರಲ್ಲಿ ಬಸ್ ಪ್ರಯಾಣಿಕರ ಹಿತದೃಷ್ಟಿಯೂ ಇದ್ದು, ಸಾರ್ವಜನಿಕರೆಲ್ಲರ ಸಹಕಾರ ಅಗತ್ಯವಿದೆ ಎಂದು ಬಜ್ಪೆಗ್ರಾಪಂ ಪಿಡಿಒ ಸಾಯೀಶ್ ಚೌಟ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News