ಕೊರೋನ ವೈರಸ್: ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳೊಂದಿಗೆ ಕೈಜೋಡಿಸಲು ಎಸ್‌ಡಿಪಿಐ ಕರೆ
ಮಂಗಳೂರು, ಮಾ.23: ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಅಪಾಯಕಾರಿ ಕೊರೋನ ವೈರಸ್ ದ.ಕ.ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದರಿಂದ ಮಾ.31ರವರೆಗೆ ನಿಗಾ ವಹಿಸುವಂತೆ ಸೂಚಿಸಿ ಲಾಕ್‌ಡೌನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳೊಂದಿಗೆ ಕೈಜೋಡಿಸಲು ಎಸ್‌ಡಿಪಿಐ ಕರೆ ನೀಡಿದೆ.
ಈಗಾಗಲೇ ಮಂಗಳೂರಿನಲ್ಲಿ ಕೂಡ 1 ಪ್ರಕರಣ ಪಾಸಿಟಿವ್ ಆಗಿ ವರದಿ ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳೊಂದಿಗೆ ಜನರು ಕೂಡ ಸ್ವಯಂ ಪ್ರೇರಿತರಾಗಿ ಕೈಜೋಡಿಸಬೇಕು. ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ವಹಿಸದೆ ತಾವೇ ಖುದ್ದಾಗಿ ಮುಂದೆ ನಿಂತು ವೈರಸನ್ನು ತಡೆಗಟ್ಟಲು ಕಾರ್ಯ ನಿರ್ವಹಿಸಬೇಕು. ಈ ವೈರಸ್‌ನಿಂದ ಭಯ ಪಡುವ ಅಗತ್ಯವಿಲ್ಲ. ಅದೇ ರೀತಿಯಲ್ಲಿ ವಿದೇಶದಿಂದ ಬಂದವರು ಆಯಾಯ ಗ್ರಾಮದ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದು ಸರಕಾರದ ಆದೇಶದಂತೆ ಎರಡು ವಾರಗಳ ಕಾಲ ಮನೆಯಿಂದ ಹೊರಗೆ ಬಾರದೇ ಜಾಗ್ರತೆ ವಹಿಸಿ ಜಿಲ್ಲಾಡಳಿತ, ಸರಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮನವಿ ಮಾಡಿದ್ದಾರೆ.