ಬಸ್, ಮೆಟ್ರೋದಲ್ಲಿ ಮೀಸಲಾತಿ ಕೋರಿ ಹೈಕೋರ್ಟ್‌ಗೆ ತೃತೀಯ ಲಿಂಗಿ ಮೊರೆ

Update: 2020-03-23 16:36 GMT

ಹೊಸದಿಲ್ಲಿ,ಮಾ.23: ಸಾರ್ವಜನಿಕ ಬಸ್‌ಗಳು ಮತ್ತು ಮೆಟ್ರೋ ರೈಲುಗಳಲ್ಲಿ ಆಸನ ಮೀಸಲಾತಿಯನ್ನು ಒದಗಿಸುವಂತೆ ಕೋರಿ ತೃತೀಯ ಲಿಂಗಿಯೋರ್ವರು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು,ಇದನ್ನು ಸಮುದಾಯದ ಅಹವಾಲು ಎಂದು ಪರಿಗಣಿಸುವಂತೆ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠವು ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ದಿಲ್ಲಿ ಮೆಟ್ರೋ ರೇಲ್ ನಿಗಮ(ಡಿಎಂಆರ್‌ಸಿ)ಗಳಿಗೆ ಸೂಚಿಸಿದೆ.

ಡಿಎಂಆರ್‌ಸಿ ರೈಲುಗಳಲ್ಲಿ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ತೃತೀಯ ಲಿಂಗಿಯ ಅರ್ಜಿಯನ್ನು ಸಮುದಾಯದ ಅಹವಾಲನ್ನಾಗಿ ಪರಿಗಣಿಸುವಂತೆ ಹಾಗೂ ಕಾನೂನು,ನಿಯಮಗಳು ಮತ್ತು ನಿಬಂಧನೆಗಳು,ಸರಕಾರದ ನೀತಿಗಳನ್ವಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪೀಠವು ಡಿಟಿಸಿ ಮತ್ತು ಡಿಎಂಆರ್‌ಸಿಗೆ ನಿರ್ದೇಶ ನೀಡಿದೆ.

 ಸಾಧ್ಯವಿದ್ದಷ್ಟು ಶೀಘ್ರ ಮತ್ತು ಕಾರ್ಯಸಾಧ್ಯ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದೂ ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News