×
Ad

ಉ.ಕ.ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಭಟ್ಕಳ ಲಾಕ್ ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ

Update: 2020-03-23 22:10 IST

ಭಟ್ಕಳ: ದೇಶ ಮತ್ತು ರಾಜ್ಯದಲ್ಲಿ  ಕೋವಿಡ್ -19 ವೈರಾಣು ಸೊಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ವಿದೇಶದಿಂದ ಬಂದಿರುವವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾ.24ರಿಂದ ಉ.ಕ.ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದು ಭಟ್ಕಳದ ಜನತೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶದಿಂದ ಮರಳುತ್ತಿದ್ದು ನಿಗಧಿತ ಸಾಮಾಜಿಕ ಅಂತರ ಕಾಯ್ದುಕೊಳ್ಳು ಸೂಚನೆ ನೀಡಿದರೂ ಸಾರ್ವಜನಿಕರು ಸರಕಾರಾತ್ಮಕವಾಗಿ ಸ್ಪಂದಿಸದೆ ಇರುವುದರಿಮದ  ಭಟ್ಕಳ ತಾಲೂಕಿನ ಸಂಪರ್ಕವನ್ನ ಸಂಪೂರ್ಣ ಬಂದ್ ( ಲಾಕ್ ಡೌನ್) ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ ಆದೇಶ ಹೊರಡಿಸಿದ್ದಾರೆ.

ಇನ್ನೂ ಜಿಲ್ಲೆಯ ಉಳಿದ ತಾಲೂಕಿನಲ್ಲಿಯೂ ಮಾ.24ರಿಂದ 144 ಜಾರಿ ಮಾಡಿಲಾಗಿದೆ. ನಿನ್ನೆ ಭಟ್ಕಳದ ಯುವಕನಲ್ಲಿ ಕೊರೋನಾ ಕಾಣಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆಗೆ ಅಥವಾ ಭಟ್ಕಳಕ್ಕೆ ಯಾವುದೆ ತೊಂದರೆ ಇಲ್ಲ. ಆ ಯುವಕ ಭಟ್ಕಳಕ್ಕೆ ಬರುವ ಮೊದಲೆ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಯಾರು ಭಯಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ಅಗತ್ಯ ಸರಕು ಸಾಗಣಿಕೆ, ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ, ಪಡಿತರ, ಹಾಲು ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಹಂಪಲು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಪಾಧಿತರ ವಿರುದ್ಧ ಕ್ರಮ ಜರಗಿಸಲು ಆಯಾ ತಾಲೂಕು ದಂಡಾಧಿಕಾರಿಗಳು ಬದ್ಧರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News