ಚೀನಾ: ಸ್ಥಳೀಯರಲ್ಲಿ ಹೊಸ ಕೊರೋನ ಸೋಂಕಿಲ್ಲ

Update: 2020-03-23 17:58 GMT

ಬೀಜಿಂಗ್, ಮಾ. 23: ಚೀನಾದಲ್ಲಿ ಸೋಮವಾರ ಯಾವುದೇ ಸ್ಥಳೀಯ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಆದರೆ, ವಿದೇಶೀಯರನ್ನೊಳಗೊಂಡ 39 ಸೋಂಕು ಪ್ರಕರಣಗಳು ವರದಿಯಾಗಿವೆ.

ಇದೇ ಅವಧಿಯಲ್ಲಿ 9 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಎಲ್ಲ ಒಂಬತ್ತು ಸಾವುಗಳು ಚೀನಾದ ಕೊರೋನವೈರಸ್ ಕೇಂದ್ರಬಿಂದು ವುಹಾನ್ ನಗರದಲ್ಲೇ ಸಂಭವಿಸಿವೆ.

ವುಹಾನ್ ರಾಜಧಾನಿಯಾಗಿರುವ ಹುಬೈ ಪ್ರಾಂತದ ಸುಮಾರು 5.6 ಕೋಟಿ ಜನರನ್ನು ಎರಡು ತಿಂಗಳ ಹಿಂದೆ ಬೀಗಮುದ್ರೆಯಲ್ಲಿಟ್ಟ ಬಳಿಕ, ಚೀನಾದಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಸತತ ಐದು ದಿನಗಳಲ್ಲಿ ಅಲ್ಲಿ ಸ್ಥಳೀಯರನ್ನೊಳಗೊಂಡ ಹೊಸ ಸೋಂಕು ಪ್ರಕರಣಗಳು ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News