ಲಾಕ್ ಡೌನ್: ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಬಂಟ್ವಾಳ ಎಸ್ಕೆಎಸ್ಸೆಸ್ಸೆಫ್ ನಿಂದ ಯೋಜನೆ

Update: 2020-03-24 15:47 GMT

ಬಂಟ್ವಾಳ, ಮಾ. 24: ಕೋವಿಡ್ - 19 (ಕೊರೋನ) ವೈರಸ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗುವ ಜಮಾಅತ್ ನ ಜನರಿಗೆ ನೆರವಾಗಲು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ಮಾದರಿ ಯೋಜನೆಯೊಂದನ್ನು ರೂಪಿಸಿದೆ.

ಲಾಕ್ ಡೌನ್ ನಿಂದ ಕೆಲಸ ಇಲ್ಲದೆ ಸಂಕಷ್ಟಕ್ಕೆ ಒಳಗಾಗುವ ಬಡವರನ್ನು ಗುರುತಿಸಿ ಅವರಿಗೆ ಜಮಾಅತ್ ವ್ಯಾಪ್ತಿಯ ದಾನಿಗಳ ನೆರವಿನಿಂದ ಅಹಾರ ಸಾಮಗ್ರಿಗಳನ್ನು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಂಕಷ್ಟದಲ್ಲಿರುವ ಎಲ್ಲಾ ಧರ್ಮಗಳ ಅರ್ಹ ಬಡ ಕುಟುಂಬಗಳಿಗೆ ದಿನ ಬಳಕೆಯ ವಸ್ತುಗಳ ಕಿಟ್ ವಿತರಿಸಲಾಗುವುದು ಎಂದು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಜಮಾಅತ್ ನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ವಿದೇಶದಲ್ಲಿರುವ ಜಮಾಅತ್ ನ ಹಲವು ದಾನಿಗಳಿಂದಲೂ ನೆರವು ಬರುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News