ಗೊಂದಲ ಬೇಡ, ಎಲ್ಲಾ ಅಗತ್ಯ ಸೇವೆಗಳು ಲಭ್ಯ: ಮಂಗಳೂರು ಕಮಿಷನರ್ ಹರ್ಷ

Update: 2020-03-24 16:03 GMT

ಮಂಗಳೂರು: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನಿ ಮೋದಿಯವರು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಲಾಕ್ ಡೌನ್ ಘೋಷಣೆಯ ನಂತರ ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಮಂಗಳೂರು ಕಮಿಷನರ್ ಹರ್ಷ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ.

“ಅಗತ್ಯ ಸೇವೆಗಳು , ದಿನಸಿ ಅಂಗಡಿಗಳು ಮತ್ತು ಇತರ ಪ್ರತಿದಿನದ ಅವಶ್ಯಕತೆಗಳ ಬಗ್ಗೆ ಗೊಂದಲವಿದೆ. ಈ ಎಲ್ಲಾ ಅಂಗಡಿಗಳು ತೆರೆದಿರಲಿವೆ. ಈ ಬಗ್ಗೆ ಹೆದರಬೇಕಾದ ಅಗತ್ಯವಿಲ್ಲ. ಅಗತ್ಯ ಸೇವೆಗಳಿಗೆ ಯಾವುದೇ ತೊಡಕಾಗದು. ದಕ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಸೇವೆಗಳು ಲಭಿಸಲಿವೆ” ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News