ಕೊರೋನವೈರಸ್ ಕೇಂದ್ರಬಿಂದುವಿನ ಪ್ರಯಾಣ ನಿರ್ಬಂಧ ತೆಗೆದ ಚೀನಾ

Update: 2020-03-24 16:56 GMT

ಬೀಜಿಂಗ್, ಮಾ. 24: ನೂತನ-ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳು ಬೀಗಮುದ್ರೆಗಳನ್ನು ಘೋಷಿಸಿರುವಂತೆಯೇ, ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಿನಲ್ಲಿ ಹೇರಲಾಗಿರುವ ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸಿರುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.

ಮಾರಕ ಸಾಂಕ್ರಾಮಿಕದ ಸೋಂಕು ಹರಡುವುದನ್ನು ತಡೆಯಲು ವಿವಿಧ ದೇಶಗಳು ಬೀಗಮುದ್ರೆಯಲ್ಲಿದ್ದು, ಸುಮಾರು 170 ಕೋಟಿ ಮಂದಿ ನಿರ್ಬಂಧದಲ್ಲಿದ್ದಾರೆ.

ವುಹಾನನ್ನು ರಾಜಧಾನಿಯಾಗಿ ಹೊಂದಿರುವ ಹುಬೈ ಪ್ರಾಂತದಲ್ಲಿ ಆರೋಗ್ಯವಂತ ನಾಗರಿಕರಿಗೆ ಮಂಗಳವಾರ ಮಧ್ಯರಾತ್ರಿಯ ಬಳಿಕ ಮುಕ್ತವಾಗಿ ಓಡಾಡಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ಜನರು ಸುಮಾರು 2 ತಿಂಗಳ ಕಾಲ ಬೀಗಮುದ್ರೆಯಲ್ಲಿದ್ದರು.

ಆದರೆ, ಈ ರಿಯಾಯಿತಿ ಅತ್ಯಂತ ಹಾನಿಗೊಳಗಾಗಿರುವ ವುಹಾನ್ ನಗರದ ನಿವಾಸಿಗಳಿಗೆ ಎಪ್ರಿಲ್ 8ರವರೆಗೆ ಅನ್ವಯಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News