ಚೀನಾ ವಿರುದ್ಧ ಅಮೆರಿಕ ವಕೀಲನಿಂದ 20 ಟ್ರಿಲಿಯ ಡಾ. ಮೊಕದ್ದಮೆ

Update: 2020-03-24 17:00 GMT

ವಾಶಿಂಗ್ಟನ್, ಮಾ. 24: ನೋವೆಲ್-ಕೊರೋನವೈರಸನ್ನು ‘ಸೃಷ್ಟಿಸಿ ಬಿಡುಗಡೆ ಮಾಡಿರುವುದಕ್ಕಾಗಿ’ ಚೀನಾದ ವಿರುದ್ಧ 20 ಟ್ರಿಲಿಯ ಡಾಲರ್ (ಸುಮಾರು 1524 ಲಕ್ಷ ಕೋಟಿ ರೂಪಾಯಿ) ಮೊಕದ್ದಮೆಯೊಂದನ್ನು ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್,ದಾಖಲಿಸಿದ್ದಾರೆ.

ಕ್ಲೇಮನ್ ಮತ್ತು ಅವರ ಸಲಹಾ ಗುಂಪು ಟೆಕ್ಸಾಸ್‌ನ ‘ಫ್ರೀಡಂ ವಾಚ್ ಆ್ಯಂಡ್ ಬಝ್ ಫೋಟೋಸ್’ ವತಿಯಿಂದ ನಾರ್ದರ್ನ್ ಡಿಸ್ಟ್ರಿಕ್ಟ್ ಆಫ್ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಚೀನಾವು ಕೊರೋನವೈರಸನ್ನು ಜೈವಿಕ ಯುದ್ಧಾಸ್ತ್ರವಾಗಿ ವಿನ್ಯಾಸಗೊಳಿಸಿದೆ ಹಾಗೂ ಅದನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆಯೋ ಇಲ್ಲವೋ, ಚೀನಾವು ಅಮೆರಿಕದ ಕಾನೂನು, ಅಂತರ್‌ರಾಷ್ಟ್ರೀಯ ಕಾನೂನುಗಳು, ಒಪ್ಪಂದಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News