ಅಮೆರಿಕ: ಕೊರೋನ ವೈರಸ್‌ನಿಂದ ಒಂದೇ ದಿನದಲ್ಲಿ 139 ಸಾವು

Update: 2020-03-24 17:35 GMT

ವಾಶಿಂಗ್ಟನ್, ಮಾ. 24: ಅಮೆರಿಕದಲ್ಲಿ ಸೋಮವಾರ ಒಂದೇ ದಿನದಲ್ಲಿ 139 ಮಂದಿ ಕೊರೋನವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ 139ಕ್ಕಿಂತ ಅಧಿಕ ಸಾವುಗಳು ಅಮೆರಿಕದಲ್ಲಿ ವರದಿಯಾಗಿರುವುದು ಇದೇ ಮೊದಲು.

ಅಲ್ಲಿ ಸೋಮವಾರದವರೆಗೆ 43,700ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 10,000ಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗಿವೆ.

ಇದರೊಂದಿಗೆ ಅಮೆರಿಕದಲ್ಲಿ ಮಾರಕ ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 550ನ್ನು ದಾಟಿದೆ.

ಕೊರೋನ ಪೀಡಿತರಿಗಾಗಿ ಸಿಖ್ಖರಿಂದ 30,000 ಊಟ ತಯಾರಿ

ನ್ಯೂಯಾರ್ಕ್, ಮಾ. 24: ಅಮೆರಿಕದಲ್ಲಿ ಕೊರೋನವೈರಸ್ ಸೋಂಕು ಪೀಡಿತರಾಗಿ ಪ್ರತ್ಯೇಕವಾಗಿರುವವರಿಗೆ ನ್ಯೂಯಾರ್ಕ್‌ನ ಸಿಖ್ ಸೆಂಟರ್ 30,000ಕ್ಕೂ ಅಧಿಕ ಮನೆಯೂಟಗಳನ್ನು ತಯಾರಿಸಿ ಪೊಟ್ಟಣಗಳಲ್ಲಿ ಕಳುಹಿಸಿಕೊಟ್ಟಿದೆ.

ಆಹಾರ ಪೊಟ್ಟಣಗಳಿಗಾಗಿ ನ್ಯೂಯಾರ್ಕ್‌ನ ಮೇಯರ್ ಕಚೇರಿ ಸಿಖ್ ಸಮುದಾಯವನ್ನು ಸಂಪರ್ಕಿಸಿದೆ. ಹಾಗೂ ಸಿದ್ಧಗೊಂಡ ಆಹಾರ ಪೊಟ್ಟಣಗಳನ್ನು ವಿತರಣೆಗಾಗಿ ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News