ಕೊರೋನ ವೈರಸ್ ಭೀತಿ: ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ತುರ್ತು ಸೇವೆಗೆ ಸಜ್ಜು

Update: 2020-03-25 05:39 GMT

ಮಂಗಳೂರು :  ಕೊರೋನ ವೈರಸ್ ಭೀತಿಯಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರಕ್ಕೆ ಕಷ್ಟ ಪಡುವ ಬಡವರ, ನಿರಾಶ್ರಿತರ, ಬಿಕ್ಷುಕರ ತುರ್ತು ಸೇವೆಗೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಎಸ್ಸೆಸ್ಸೆಫ್ ವೆಸ್ಟ್ ಝೋನ್ ಸಮಿತಿ ಸಿದ್ಧವಾಗಿದೆ.

ಸುರತ್ಕಲ್ ಭಾಗದಲ್ಲಿ ಹೈದರಾಲಿ, ರಿಝ್ವಾನ್, ತನ್ಶೀರ್, ಹನೀಫ್ ಅಹ್ಸನಿ ನೇತೃತ್ವದ ಟೀಮ್ ಕಾರ್ಯಾಚರಿಸುತ್ತ ಆಹಾರ ಪೂರೈಸುತ್ತಿದೆ. ಅದೇ ರೀತಿ ಮಂಗಳೂರು, ಉಳ್ಳಾಲ, ಬಂಟ್ವಾಳ, ಮುಡಿಪು, ಮೂಡುಬಿದಿರೆ ಭಾಗಗಳಲ್ಲಿಯೂ ವೆಸ್ಟ್ ಝೋನ್ ನಾಯಕರ ನೇತೃತ್ವದಲ್ಲಿ ಅಹಾರ ವಿತರಣೆ, ರಕ್ತದಾನ, ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಬೇಕಾದ ತುರ್ತು ಸೇವೆಗಳನ್ನು ಮಾಡಲು ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ಸಜ್ಜಾಗಿದೆ ಎಂದು ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8970831914 ,7899129784, 9900084313, 9036910140, 9663360112 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News