ಸಮಸ್ತ ಪಬ್ಲಿಕ್ ಪರೀಕ್ಷೆಗಳು ಮುಂದೂಡಿಕೆ

Update: 2020-03-25 15:41 GMT

ಚೇಳಾರಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಆಗಿರುವುದರಿಂದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಎ.3,4,5ರಂದು ಮತ್ತು ವಿದೇಶಗಳಲ್ಲಿ, ಎ. 4,5,6 ರಂದು ನಿಗದಿ ಮಾಡಿದ್ದ 5,7,10,12 ತರಗತಿಗಳ ಮದ್ರಸ ಪಬ್ಲಿಕ್ ಪರೀಕ್ಷೆಗಳು ಮತ್ತು ಎ. 11,12,13ರಂದು ನಿಗದಿಯಾದ ಫಾಳಿಲ ಪ್ರಥಮ ವರ್ಷ ಪರೀಕ್ಷೆಗಳು ಮುಂದೂಡಿರುವುದಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಚೆಯರ್ಮೆನ್ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ತಿಳಿಸಿದ್ದಾರೆ.

ನವೀಕೃತ ದಿನಾಂಕ ಮತ್ತೆ ತಿಳಿಸಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News