ಭಟ್ಕಳ : ಹೃದಯಘಾತದಿಂದ ಲಾರಿ ಚಾಲಕ ಮೃತ್ಯು
Update: 2020-03-25 21:17 IST
ಭಟ್ಕಳ : ಆಂಧ್ರ ಪ್ರದೇಶದಿಂದ ಭಟ್ಕಳಕ್ಕೆ ಲಾರಿ ಮೂಲಕ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ನಗರದ ಸೂಪರ್ ಮಾರ್ಕೆಟ್ ಗಾಗಿ ಲಾರಿ ಮೂಲಕ ಅಕ್ಕಿಯನ್ನು ತಂದ ಚಾಲಕನಿಗೆ ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ನಂತರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ನಗರಠಾಣೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಮೃತನ ಕುರಿತಂತೆ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.