ಕೊರೋನ ಲಾಕ್ ಡೌನ್ : ಬಿ- ಹ್ಯೂಮನ್, ಎನ್.ಎಂ.ಸಿ ಸೇವಾ ತಂಡದಿಂದ ವಲಸಿಗರಿಗೆ ಊಟ ವಿತರಣೆ

Update: 2020-03-25 17:27 GMT

ಮಂಗಳೂರು : ಕೊರೋನ ವೈರಸ್ ಭೀತಿಯಿಂದ ಲಾಕ್ ಡೌನ್ ಆದ ಪರಿಣಾಮ ಮಂಗಳೂರು ನಗರದಾದ್ಯಂತ ದಿನಗೂಲಿ ಕಾರ್ಮಿಕರು, ಬೇರೆ ರಾಜ್ಯದಿಂದ ಬಂದ ವಲಸಿಗರು, ನಿರ್ವಸಿತರಿಗೆ  ಟೀಂ ಬಿ- ಹ್ಯೂಮನ್ ಮತ್ತು ಎನ್.ಎಂ.ಸಿ ಸೇವಾ ತಂಡ ಊಟ ವಿತರಿಸಿದೆ.

ಹೋಟೆಲ್ ಗಳು ಸಂಪೂರ್ಣ ಮುಚ್ಚಿರುವ ಕಾರಣದಿಂದ ಕಾರ್ಮಿಕರು ರೈಲ್ವೇ ಸ್ಟೇಶನ್, ಬಸ್ ನಿಲ್ದಾಣ, ರಸ್ತೆ, ಅಂಗಡಿ ಬಾಗಿಲುಗಳ ಮುಂದೆ ಹಸಿವು ತಾಳಲಾಗದೆ, ತಮ್ಮ ಊರಿಗೆ ಹೋಗಲಾಗದೆ ಇದ್ದ ಅವರಿಗೆ ಬಿ- ಹ್ಯೂಮನ್ ಮತ್ತು ಎನ್.ಎಂ.ಸಿ ಸೇವಾ ತಂಡದ ಕಾರ್ಯಕರ್ತರು ಊಟ - ಉಪಹಾರವನ್ನು ಒದಗಿಸಿದರು.

ಒಂದು ಜೀವದ ಹಸಿವು ತಣಿಸುವುದು ಮನುಷ್ಯನ ಸತ್ಕರ್ಮಗಳ ಪೈಕಿ ಅತ್ಯುತ್ತಮ ಪುಣ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸೇವಾ ಕಾರ್ಯಕರ್ತರ ಪ್ರಯತ್ನವಾಗಿದೆ. ದೇಶಕ್ಕೆ ಮತ್ತು ಜನತೆಗೆ ಒದಗಿರುವ ಈ ಅಪಾಯಕಾರಿ ಪರಿಸ್ಥಿತಿಯು ಶಮನವಾಗಲಿ ಎಂದು ಪ್ರಾರ್ಥಿಸುವುದಾಗಿ ತಂಡದ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭ ಆಸಿಫ್ ಡೀಲ್ಸ್, ಬಾಶ ಕಂಡತ್ ಪಳ್ಳಿ,  ಎಕೆಎಚ್ ಅಲ್ತಾಫ್, ರಿಝ್ವಾನ್ ಪಾಂಡೇಶ್ವರ, ಅನೀಫ್, ಯಾತ್ರಿ ಟ್ರಾನ್ಸ್ ಪೋರ್ಟ್ ಸಾದಿಕ್ ಬೆಂಗರೆ, ವಾಜಿದ್ ಕಂದಕ್, ಅನೀಸ್ ಮುಳಿಹಿತ್ಲು, ತೌಫಿಕ್ ಕಾರ್ಕಳ, ಹಮೀದ್ ಕುಡ್ಪಾಡಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News