'ಕೋವಿಡ್-19' ಟ್ರ್ಯಾಕರ್ ಅಭಿವೃದ್ಧಿಪಡಿಸಿದ ಭಾರತದ ವಿದ್ಯಾರ್ಥಿಗಳು: ಇದರ ವಿಶೇಷತೆಯೇನು ಗೊತ್ತಾ?

Update: 2020-03-26 11:44 GMT

ಹೊಸದಿಲ್ಲಿ: ಹೈದರಾಬಾದ್‍ ನ ಇಂಜಿನಿಯರಿಂಗ್ ಕಾಲೇಜು- ಮಹೀಂದ್ರ ಇಕೋಲೆ ಸೆಂಟ್ರಲ್ ನ ಮೂವರು ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಆಗಿಯೂ ಇನ್‍ ಸ್ಟಾಲ್ ಮಾಡಬಹುದಾದ ಭಾರತದ ಪ್ರಥಮ ಜಿಲ್ಲಾವಾರು ಕೋವಿಡ್-19 ಟ್ರ್ಯಾಕರ್ ವೆಬ್‍ಸೈಟ್ ಅಭಿವೃದ್ಧಿಪಡಿಸಿದ್ದಾರೆ.

ಈ ವೆಬ್‍ಸೈಟ್ ಆರೋಗ್ಯ ಇಲಾಖೆಗಳ ವೆಬ್‍ ಸೈಟ್ ಹಾಗೂ ಸುದ್ದಿ ತಾಣಗಳ ಮಾಹಿತಿಗಳನ್ನು ಪಡೆದು ಅವುಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ ನಂತರ ತನ್ನ ವೆಬ್‍ ಸೈಟ್ ನಕ್ಷೆಯಲ್ಲಿ ಅಪ್‍ಲೋಡ್ ಮಾಡುತ್ತದೆ.

ವೈರಸ್ ಬಾಧಿತ ವಲಯಗಳಿಂದ ದೂರವಿರಲು ಪ್ರಯಾಣಿಕರಿಗೆ ಇದು ಸಹಕಾರಿಯಾಗಲಿದೆ. ಈ  ಕೋವಿಡ್ ಟ್ರ್ಯಾಕರ್ ವೆಬ್‍ಸೈಟ್- 'ಕೋವ್‍ ಇಂಡಿಯಾ' (Covindia)  ಅನ್ನು ಮೂರನೇ ವರ್ಷದ  ಇಂಜಿನಿಯರಿಂಗ್ ವಿದ್ಯಾರ್ಥಿ ರಾಘವ್ ಎನ್. ಎಸ್. ಹಾಗೂ ಮೊದಲನೇ ವರ್ಷದ ವಿದ್ಯಾರ್ಥಿಗಳಾದ ಅನಂತ ಶ್ರೀಕರ್ ಹಾಗೂ ರಿಷಬ್ ರಾಮನಾಥನ್ ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಈ ವೆಬ್‍ ಸೈಟ್ ಕಾರ್ಯನಿರ್ವಹಣೆಗೆ ಹಾಗೂ ಸಂಗ್ರಹಿಸಲಾದ ಮಾಹಿತಿಯನ್ನು ಪರಾಮರ್ಶಿಸಲು ಕಾಲೇಜಿನ ಇತರ ವಿದ್ಯಾರ್ಥಿಗಳು ಕೂಡ ಸಹಾಯ ನೀಡುತ್ತಿದ್ದಾರೆ. ಈ ವೆಬ್‍ ಸೈಟ್‍ ನಲ್ಲಿನ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಅಪ್ಡೇಟ್ ಮಾಡಲಾಗುತ್ತದೆ. ಮಾಹಿತಿ ಸಂಗ್ರಹಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ನಂತರ  ಅದನ್ನು ಪರಾಮರ್ಶಿಸಲು ಹ್ಯೂಮನ್ ಇಂಟಲಿಜೆನ್ಸ್ ಬಳಸುತ್ತೇವೆ ಎಂದು ರಾಘವ್ ತಿಳಿಸುತ್ತಾರೆ.

ತಮ್ಮ ವೆಬ್‍ ಸೈಟ್‍ ನಲ್ಲಿನ ಮಾಹಿತಿಗಳ ಮೂಲಗಳ ಲಿಂಕ್ ಕೂಡ ನೀಡಲಾಗುತ್ತದೆ, ತಪ್ಪೇನಾದರೂ ಇದ್ದರೆ ತಮ್ಮ ಗಮನಕ್ಕೂ ಬಳಕೆದಾರರು ತರಬಹುದಾಗಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News