'ಲಾಕ್‍ ಡೌನ್' ವೇಳೆ ಹೆಚ್ಚಿನ ಶಾಖೆಗಳನ್ನು ಮುಚ್ಚಲಿವೆ ದೇಶದ ಬ್ಯಾಂಕ್‍ ಗಳು: ವರದಿ

Update: 2020-03-26 12:15 GMT

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ದೇಶದ ಹಲವಾರು ಪ್ರಮುಖ ಬ್ಯಾಂಕುಗಳು ದೇಶಾದ್ಯಂತ ಲಾಕ್‍ ಡೌನ್ ಹಿನ್ನೆಲೆಯಲ್ಲಿ ತಮ್ಮ ಹೆಚ್ಚಿನ ಶಾಖೆಗಳನ್ನು ಮುಚ್ಚುವ  ನಿಟ್ಟಿನಲ್ಲಿ ಯೋಚಿಸುತ್ತಿವೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ ಎಂದು Reuters  ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಲಾಗಿರುವ ಈ ಲಾಕ್ ಡೌನ್ ವೇಳೆ ಕರ್ತವ್ಯ ನಿರ್ವಹಿಸುವ ಸಾವಿರಾರು ಬ್ಯಾಂಕ್ ಉದ್ಯೋಗಿಗಳು ಈ ಸೋಂಕಿನಿಂದ ಬಾಧಿತವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಬ್ಯಾಂಕ್ ಶಾಖೆಗಳನ್ನೂ ಮುಚ್ಚಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ.

ಪ್ರಸ್ತಾವದಂತೆ ಪ್ರಮುಖ ನಗರಗಳಲ್ಲಿ ಪ್ರತಿ ಐದು ಕಿಮೀ ವ್ಯಾಪ್ತಿಯಲ್ಲಿ ಕೇವಲ ಒಂದು ಬ್ಯಾಂಕ್ ಮಾತ್ರ ಕಾರ್ಯಾಚರಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು ಬ್ಯಾಂಕುಗಳು ಎರಡು ದಿನಗಳಿಗೊಮ್ಮೆ ಕಾರ್ಯಾಚರಿಸಬಹುದು ಎಂದೂ ಹೇಳಲಾಗುತ್ತಿದೆ. ಮುಖ್ಯವಾಗಿ ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದಿರದ ಗ್ರಾಮೀಣ ಜನರಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ಬ್ಯಾಂಕ್‍ ಗಳು ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುವ ಸಾಧ್ಯತೆಯಿದೆ ಎಂದೂ Reuters ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News