ರಸ್ತೆಯಲ್ಲೇ ಮಣ್ಣಿನ ತಡೆಗೋಡೆ : ಕರ್ನಾಟಕ - ಕೇರಳ ಗಡಿ ರಸ್ತೆ ಸಂಪೂರ್ಣ ಬಂದ್

Update: 2020-03-26 13:32 GMT

ಕೊಣಾಜೆ : ಕೇರಳ ಕರ್ನಾಟಕ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದರೂ ಹಲವರು ವಾಹನಗಳ ಮೂಲಕ ಮುಡಿಪು, ನರಿಂಗಾನ ಸಮೀಪದ ಗಡಿ ರಸ್ತೆಗಳ ಮೂಲಕ ಬರುತ್ತಿದ್ದು ಇದರಿಂದ ಎರಡು ಭಾಗದ ಪೊಲೀಸರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದೊಂದಿಗೆ ಮಂಜನಾಡಿ, ನರಿಂಗಾನ, ಬಾಳೆಪುಣಿ ಗ್ರಾಮಗಳಲ್ಲಿ ಕೇರಳಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಮಣ್ಣು ಹಾಕಿ‌ ಸಂಪೂರ್ಣವಾಗಿ ಮುಚ್ಚಲಾಗಿದೆ.

ಪಾತೂರು, ‌ನಾರ್ಲ, ನಂದರಪಡ್ಪು, ತೌಡುಗೋಳಿ ಮೊದಲಾದೆಡೆ ಕೇರಳಕ್ಕೆ ಸಂಪರ್ಕಿಸುವ ರಸ್ತೆಗಳಿವೆ. ಕಳೆದ ಕೆಲವು ದಿನಗಳ ಹಿಂದೆ ಎರಡು ರಾಜ್ಯಗಳಿಂದ ಸಂಪರ್ಕ ವನ್ನು ಕಡಿತಗೊಳಿಸಲು ಆದೇಶಿದ್ದರೂ ಕೆಲವರು ಹಲವರು ಕಾರಣ ನೀಡಿ‌ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದರು. ಇದರಿಂದ ಗಡಿ ಪ್ರದೇಶದ ಸ್ಥಳೀಯರು ಹಾಗೂ ಪೊಲೀಸರು‌ ಕೂಡಾ ಬಹಳಷ್ಟು‌ ತೊಂದರೆಯನ್ನೆದುರಿಸುತ್ತಿದ್ದರು.  ಇದೀಗ ಜೆಸಿಬಿ ಯಂತ್ರದ ಮೂಲಕ ಸಂಪೂರ್ಣವಾಗಿ ಮಣ್ಣು ಹಾಕಿ ರಸ್ತೆಯನ್ನು ಮುಚ್ಚಲಾಗಿದ್ದು ಯಾವುದೇ ದ್ವಿಚಕ್ರ ವಾಹನಕ್ಕೂ ಸಂಚರಿಸಲು ಅವಕಾಶ ಇಲ್ಲದ ಹಾಗೆ ಮಣ್ಣು‌ಹಾಕಲಾಗಿದೆ‌ ಎಂದು ತಿಳಿದು  ಬಂದಿದೆ.

ಆಕ್ರೋಶ: ಕೇರಳ ಗಡಿ ರಸ್ತೆಯನ್ನು ಮುಚ್ಚುವುದಕ್ಕೆ ಹಲವರಿಂದ ಶ್ಲಾಘನೆ ವ್ಯಕ್ತವಾದರೂ ಗಡಿ ಪ್ರದೇಶದ ಹಲವರು ಆರೋಗ್ಯಕ್ಕೆ ಸಂಬಂಧಿಸಿ ದಂತೆ ಅಗತ್ಯ ವಾಹನಗಳು ಅಥವಾ ಅಂಬ್ಯುಲೆನ್ಸ್ ವಾಹನಕ್ಕೂ ಹೋಗದಂತೆ ಮಣ್ಣು ಹಾಕಿರುವುದರಿಂದ ಆಕ್ರೋಶಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News