×
Ad

ಸಂಸದರ ನಿಧಿಯಿಂದ ಕೊರೋನ ವಿರುದ್ಧ ಹೋರಾಟಕ್ಕೆ ಒಂದು ಕೋಟಿ ರೂ. ನೆರವು: ಆಸ್ಕರ್ ಫೆರ್ನಾಂಡೀಸ್

Update: 2020-03-26 20:30 IST

ಉಡುಪಿ, ಮಾ.26: ರಾಜ್ಯದಲ್ಲಿ ಹರಡುತ್ತಿರುವ ಕೊರೋನ ವೈರಸ್ (ಕೋವಿಡ್-19) ನಿಯಂತ್ರಣ ಹಾಗೂ ಶಮನಕ್ಕೆ ಕ್ರಮಕೈಗೊಳ್ಳಲು ತಮ್ಮ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನ ನಿಧಿಯಿಂದ ಒಂದು ಕೋಟಿ ರೂ. ಅನುದಾನದ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಎಸ್.ಎಸ್.ತೋನ್ಸೆ ಕೊಡುಗೆ: ಕರ್ನಾಟಕ ಮುಖ್ಯಮಂತ್ರಿಯವರ ಕೊರೋನ ಸೋಂಕಿತರ ಚಿಕಿತ್ಸಾ ನಿಧಿಗೆ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಅವರು ತನ್ನ ಒಂದು ತಿಂಗಳ ನಿವೃತ್ತ ವೇತನದ ಮೊತ್ತವಾದ 36,985ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿಯವರ ಕೊರೋನ ಸೋಂಕಿತರ ಚಿಕಿತ್ಸಾ ನಿಧಿಗೆ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಅವರು ತನ್ನ ಒಂದು ತಿಂಗಳ ನಿವೃತ್ತ ವೇತನದ ಮೊತ್ತವಾದ 36,985ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News