ಮಣಿಪಾಲ: ಕೊರೋನ ಜಾಗೃತಿ ಮರಳು ಶಿಲ್ಪ
Update: 2020-03-26 20:32 IST
ಮಣಿಪಾಲ, ಮಾ.26: ಮಣಿಪಾಲ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಇವರುಗಳು ಕೊರೋನ ವೈರಸ್ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ಅರ್ಥಗರ್ಭಿತ ಮರಳು ಶಿಲ್ಪವನ್ನು ರಚಿಸಿದ್ದಾರೆ.
ಕಲಾಕೃತಿಯಲ್ಲಿ ಇಡೀ ಭಾರತ ದೇಶವೇ ಲಾಕ್‌ಡೌನ್ ಆಗಿರುವುದನ್ನು ಬಿಂಬಿಸಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಯಾರು ಸಹ ಮನೆ ಬಿಟ್ಟು ಹೊರಗೆ ಬಾರದೇ, ಈ ಮೂಲಕ ವೈರಸ್ ಹರಡದಂತೆ ತಮ್ಮ ಸಹಕಾರ ನೀಡಿ ಎಂದು ಕಲಾವಿದರು ತಮ್ಮ ಕಲಾಕೃತಿಯ ಮೂಲಕ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.