ಕೊರೋನ ವೈರಸ್ : ದ.ಕ.ಜಿಲ್ಲೆಯ ಇಂದಿನ ವೈದ್ಯಕೀಯ ವಿವರ

Update: 2020-03-26 15:42 GMT

ಮಂಗಳೂರು, ಮಾ.26: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಅದರಂತೆ ಗುರುವಾರ ದ.ಕ.ಜಿಲ್ಲೆಯಲ್ಲಿ 46 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,051 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ.

ಮನೆಯಲ್ಲೇ ನಿಗಾದಲ್ಲಿರುವವರು 2,902 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು 27 ಮಂದಿ, 28 ದಿನದ ನಿಗಾ ಅವಧಿ ಪೂರೈಸಿದರವರು 20, ತಪಾಸಣೆಗೆ ಮಾದರಿ ರವಾನೆ 4, ತಪಾಸಣೆಯ ವರದಿ ಸ್ವೀಕಾರ 9 ಮತ್ತು ಗುರುವಾರ ನಿಗಾಕ್ಕೆ ದಾಖಲಾದವರು 3 ಮಂದಿ ಎಂದು ವರದಿಯಾಗಿದೆ.

ದ.ಕ.ಜಿಲ್ಲೆಯ ಆಶಾ ಕಾರ್ಯಕರ್ತೆಯರು ಈವರೆಗೆ 2,95,248 ಮನೆಗಳಿಗೆ ಭೇಟಿ ನೀಡಿ 12,02,896 ಮಂದಿಗೆ ಕೊರೋನ ವೈರಸ್ ತಡೆಗಟ್ಟಲು ವಿಶೇಷ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಹೆಲ್ಪ್‌ಲೈನ್ 1077 ಕರೆ ಮಾಡಿ

ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆದಿದೆ. ತುರ್ತು ಸಂದರ್ಭ ಸಹಕರಿಸಲು ಮತ್ತು ವೈದ್ಯಕೀಯ ಮಾಹಿತಿ ಅಥವಾ ವೈದ್ಯರ ಸಂಪರ್ಕದ ನಿಟ್ಟಿನಲ್ಲಿ ‘ಹೆಲ್ಪ್‌ಲೈನ್ 1077’ಗೆ ಕರೆ ಮಾಡಿ ತುರ್ತು ಸೇವೆಯನ್ನು ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News