ಲಾಕ್ಡೌನ್: ಸಂಕಷ್ಟದಲ್ಲಿರುವವರಿಗೆ ಬೆಳ್ತಂಗಡಿ ಕಾಂಗ್ರೆಸ್ ನಿಂದ ಊಟದ ವ್ಯವಸ್ಥೆ
Update: 2020-03-27 14:12 IST
ಬೆಳ್ತಂಗಡಿ, ಮಾ.27: ಲಾಕೌಟ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ ನಿರಾಶ್ರಿತರಿಗೆ ಹಾಗೂ ಸರಕಾರಿ ಸೇವೆಯಲ್ಲಿರುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿತ್ತು.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಅಗತ್ಯವಿರುವವರಿಗೆ ಊಟವನ್ನು ಪಾರ್ಸೆಲ್ ಆಗಿ ನೀಡಲಾಗುತ್ತಿದ್ದು, ನಿರ್ಗತಿಕರು, ಭಿಕ್ಷುಕರು ಹಾಗೂ ಪೇಟೆಯಲ್ಲಿ ಇರುವ ಅಸಹಾಯಕರು ಆಗಮಿಸಿ ಊಟದ ಪಾರ್ಸಲ್ ಅನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶೈಲೇಶ್ ಕುಮಾರ್ ಕುರ್ತೊಡಿ, ಯುವ ಕಾಂಗ್ರಸ್ ಅಧ್ಯಕಷ ಅಭಿನಂದನ್ ಹರೀಶ್ ಕುಮಾರ್, ಮುಖಂಡರಾದ ಅನಿಲ್ ಪೈ ಬಂಗಾಡಿ , ಭರತ್ ಕುಮಾರ್ ಇಂದಬೆಟ್ಟು, ಬಿ.ಕೆ.ವಸಂತ್ , ಅಜಯ್ ಎ.ಜೆ., ಜಯದೇವ್ ಸಾವಂತ, ಗುರುರಾಜ್ ಕಿಲ್ಲೂರು, ಅಲ್ವಿನ್ ಅಪೋಸ್, ಗಣೇಶ್ ಕಣಿಯೂರು ಮತ್ತಿತರರು ಉಪಸ್ಥಿತರಿದ್ದರು.