ದಿನಸಿ ಮೇಲೆ ಉಗುಳಿದ ಮಹಿಳೆ: 26 ಲಕ್ಷ ರೂ. ಮೌಲ್ಯದ ಆಹಾರಗಳನ್ನು ಎಸೆದ ಸೂಪರ್ ಮಾರ್ಕೆಟ್

Update: 2020-03-27 10:54 GMT

ಪೆನ್ನಿಸಿಲ್ವೇನಿಯಾ: ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್ ನಲ್ಲಿದ್ದ ಹಲವಾರು ತಿಂಡಿ ತಿನಿಸು ಹಾಗೂ ಇತರ ದಿನಸಿ ಸಾಮಗ್ರಿಗಳ ಪ್ಯಾಕೇಟುಗಳ ಮೇಲೆ ಉದ್ದೇಶಪೂರ್ವಕವಾಗಿ ಉಗುಳಿದ ಪರಿಣಾಮ ಸ್ಟೋರ್‍ ನ ಸಿಬ್ಬಂದಿ ಸುಮಾರು  26  ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ಅನಿವಾರ್ಯವಾಗಿ ಎಸೆಯಬೇಕಾದ ಪ್ರಸಂಗ ಎದುರಾಗಿದೆ. ಅಮೆರಿಕಾದ ಪೆನ್ನಿಸಿಲ್ವೇನಿಯಾದ ಲುಝೆರ್ನ್ ಕೌಂಟಿಯ ಗೆರ್ರಿಟೀಸ್ ಸೂಪರ್ ಮಾರ್ಕೆಟ್‍ ನಲ್ಲಿ ಈ ಘಟನೆ ನಡೆದಿದೆ.

ಕೊರೋನ ಹಾವಳಿಯಿಂದಾಗಿ ಜನರು ಅಗತ್ಯ ವಸ್ತುಗಳನ್ನು ಹೆಚ್ಚು ಹೆಚ್ಚು ಖರೀದಿಸಿ ಶೇಖರಿಸಿಡುತ್ತಿರುವ ಸಂದರ್ಭದಲ್ಲಿ ಸೂಪರ್ ಮಾರ್ಕೆಟ್‍ ಗಳಲ್ಲಿನ ಸ್ಟಾಕ್‍ ಗಳು ಕಡಿಮೆಯಾಗುತ್ತಿರುವ ದಿನಗಳಲ್ಲಿ ಇಂತಹ ಒಂದು ಘಟನೆ ಹಲವರನ್ನು ಧೃತಿಗೆಡಿಸಿದೆ.

ಬುಧವಾರ ಅಪರಾಹ್ನ ಸುಮಾರು 2:20ಕ್ಕೆ ಸ್ಟೋರ್ ಪ್ರವೇಶಿಸಿದ ಮಹಿಳೆಯ ಈ ಕೃತ್ಯವನ್ನು ಗಮನಿಸಿದ್ದ ಸಿಬ್ಬಂದಿ ಆಕೆಯನ್ನು ಅಲ್ಲಿಂದ ಹೊರಕ್ಕೆ ಕೊಂಡೊಯ್ದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು ಆಕೆಯನ್ನು ಕೊರೋನ ವೈರಸ್ ಪರೀಕ್ಷೆಗೂ ಒಳಪಡಿಸಲಾಗುವುದೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News