ರಸ್ತೆಯಲ್ಲಿ ನಿಂತು ಜನರಿಗೆ 'ಸಾಮಾಜಿಕ ಅಂತರ'ದ ಪಾಠ ಹೇಳಿದ ಮಮತಾ ಬ್ಯಾನರ್ಜಿ: ವ್ಯಾಪಕ ಮೆಚ್ಚುಗೆ

Update: 2020-03-27 11:39 GMT

ಹೊಸದಿಲ್ಲಿ: ಬಾಯಿ ಹಾಗೂ ಮೂಗನ್ನು ಮುಚ್ಚುವಂತಹ ಬಿಳಿ ಬಟ್ಟೆಯನ್ನು ಮುಖಕ್ಕೆ ಸುತ್ತಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದ ರಸ್ತೆಯೊಂದರಲ್ಲಿ ವೃತ್ತಾಕಾರದಲ್ಲಿ ಗುರುತು ಹಾಕುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಖ್ಯಮಂತ್ರಿಯೊಬ್ಬರು ಎಲ್ಲಾ ಶಿಷ್ಟಾಚಾರಗಳನ್ನು ಮೀರಿ ಅಲ್ಲಿನ ತರಕಾರಿ ಮಾರಾಟಗಾರರಿಗೆ ಸಾಮಾಜಿಕ ಅಂತರವೇನೆಂಬುದನ್ನು ತೋರಿಸುತ್ತಿರುವ ಈ ವೀಡಿಯೋ ನೆಟ್ಟಿಗರಿಂದ ಪ್ರಶಂಸೆ ಗಿಟ್ಟಿಸಿದೆ.

ಮಮತಾ ಹೀಗೆ ನಗರದ ಪೋಸ್ಟ್ ಮಾರ್ಕೆಟ್, ಜನ್ ಬಜಾರ್, ತಾಲ್ತಲಾ ಬಜಾರ್ ಹಾಗೂ ಗರಿಯಹಟ್ ಮಾರ್ಕೆಟ್ ಪ್ರದೇಶಗಳಿಗೆ ತೆರಳಿ ಅಲ್ಲಿನ ವರ್ತಕರಿಗೆ ಸಾಮಾಜಿಕ ಅಂತರ ಕಾಪಾಡಿ ಕೊರೋನ  ಹರಡುವಿಕೆಯನ್ನು ತಡೆಗಟ್ಟುವಂತೆ ಕೋರಿದರು.

ರಾಜ್ಯದ ಅತ್ಯಂತ ದೊಡ್ಡ ರಖಂ ಮಾರ್ಕೆಟ್ ಆಗಿರುವ ಪೋಸ್ಟ್ ಮಾರ್ಕೆಟ್ ಸಂಜೆ ಐದು ಗಂಟೆ ತನಕ ತೆರೆದಿರುತ್ತದೆ ಹಾಗೂ ವಲಸಿಗ ಕಾರ್ಮಿರನ್ನು ಹತ್ತರದ ಬುರ್ರಾ ಬಜಾರ್ ಪ್ರದೇಶದಲ್ಲರುವ ಅತಿಥಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗುವುದು ಎಂದು ಮಮತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News