×
Ad

ಸಾಲಿಗ್ರಾಮ: ಎ.1ರಿಂದ ಎರಡು ದಿನಗಳಿಗೊಮ್ಮೆ ನೀರು

Update: 2020-03-27 20:10 IST

ಉಡುಪಿ, ಮಾ.27: ಬೇಸಿಗೆಯು ಈಗಾಗಲೇ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಈ ಕಾರಣದಿಂದ ನಳ್ಳಿ ಸಂಪರ್ಕ ಪಡೆದಿರುವ ಎಲ್ಲಾ ಖಾತೆದಾರರು/ಅನುಭೋಗದಾರರಿಗೆ ಪ್ರತಿದಿನ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಎಲ್ಲಾ ವಾರ್ಡ್‌ಗಳಿಗೆ ಎಪ್ರಿಲ್ 1ರಿಂದ ಎರಡು ದಿನಗಳಿಗೆ ಒಮ್ಮೆ ನೀರನ್ನು ಸರಬರಾಜು ಮಾಡಲು ಉದ್ದೇಶಿಸಿದ್ದು ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News