ಕೊರೋನ ಭೀತಿ: ನಡೆಯದ ಜುಮಾ ನಮಾಝ್
Update: 2020-03-27 20:24 IST
ಉಡುಪಿ, ಮಾ. 27: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶ ಹಾಗೂ ಉಡುಪಿ ಜಿಲ್ಲಾ ಖಾಝಿಯ ಮನವಿಯಂತೆ ಇಂದು ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಸ್ಥಗಿತಗೊಳಿಸಲಾಗಿತ್ತು.
ಸಾವಿರಾರು ಸಂಖ್ಯೆಯ ಮುಸ್ಲಿಮರು ನಿರ್ವಹಿಸುತ್ತಿದ್ದ ಮಧ್ಯಾಹ್ನದ ಈ ಸಾಮೂಹಿಕ ನಮಾಝ್‌ಗೆ ಲಾಕ್‌ಡೌನ್ ಕಾರಣಕ್ಕಾಗಿ ನಿರ್ಬಂಧ ವಿಧಿಸ ಲಾಗಿತ್ತು. ಇದರ ಪರಿಣಾಮವಾಗಿ ಇಂದು ಉಡುಪಿ, ಕಾಪು, ಗಂಗೊಳ್ಳಿ, ಕುಂದಾಪುರ, ಕಾರ್ಕಳ, ಪಡುಬಿದ್ರಿ, ನಾವುಂದ, ಶಿರೂರು ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಲ್ಲಿ ಜುಮಾ ನಮಾಝ್ ನಡೆಯಲಿಲ್ಲ.
ಈ ಮಾಹಿತಿ ಮೊದಲೇ ಪಡೆದಿದ್ದ ಮುಸ್ಲಿಮರು ಮಸೀದಿಯತ್ತ ಇಂದು ಬರಲಿಲ್ಲ. ಬಹುತೇಕ ಮಸೀದಿಗಳ ಗೇಟುಗಳಿಗೆ ಬೀಗ ಹಾಕಿರುವುದು ಕಂಡು ಬಂತು. ಅದರ ಬದಲು ಖಾಝಿಯ ಮನವಿಯಂತೆ ಮುಸ್ಲಿಮರು ಮಸೀದಿ ಗಳ ಬದಲು ಮನೆಯಲ್ಲಿ ನಮಾಝ್ ನಿರ್ವಹಿಸಿದರು.