2 ದಿನಗಳ ಬದಲು ಎರಡೂವರೆ ಗಂಟೆಯಲ್ಲೇ ಕೊರೋನ ಪತ್ತೆ

Update: 2020-03-27 15:27 GMT

ವಾಶಿಂಗ್ಟನ್, ಮಾ. 27: ರಾಬರ್ಟ್ ಬಾಶ್ ಜಿಎಮ್‌ಬಿಎಚ್ ಕಂಪೆನಿಯು ನೂತನ-ಕೊರೋನವೈರಸ್ ಕಾಯಿಲೆಯನ್ನು ಪತ್ತೆಹಚ್ಚುವ ಹೊಸ ಪರೀಕ್ಷಾವಿಧಾನವೊಂದನ್ನು ಘೋಷಿಸಿದೆ ಹಾಗೂ ಈ ವಿಧಾನದ ಮೂಲಕ ಕೇವಲ ಎರಡೂವರೆ ಗಂಟೆಗೂ ಕಡಿಮೆ ಅವಧಿಯಲ್ಲಿ ರೋಗವನ್ನು ಖಚಿತಪಡಿಸಬಹುದು ಎಂದು ಹೇಳಿದೆ.

ನೂತನ ಪರೀಕ್ಷಾ ವಿಧಾನದಲ್ಲಿ, ಬಾಶ್ ಕಂಪೆನಿಯ ಆರೋಗ್ಯ ಕಾಳಜಿ ವಿಭಾಗ ಸಿದ್ಧಪಡಿಸಿರುವ ‘ವಿವಾಲಿಟಿಕ್ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್ ಪ್ಲಾಟ್‌ಫಾರ್ಮನ್ನು ಬಳಸಲಾಗಿದೆ. ಈ ಉಪಕರಣವನ್ನು ಇನ್‌ಫ್ಲುಯೆಂಝ ಮತ್ತು ನ್ಯುಮೋನಿಯ ಸೇರಿದಂತೆ ವಿವಿಧ ಬ್ಯಾಕ್ಟೀರಿಯ ಮತ್ತು ವೈರಸ್ ಕಾಯಿಲೆಗಳನ್ನು ಪತ್ತೆಹಚ್ಚಲು ಈಗಾಗಲೇ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತಿದೆ.

ಈ ಸಲಕರಣೆಯು ಜರ್ಮನಿಯಲ್ಲಿ ಎಪ್ರಿಲ್‌ನಲ್ಲಿ ಲಭ್ಯವಿರುತ್ತದೆ ಹಾಗೂ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಬಾಶ್ ಕಂಪೆನಿ ತಿಳಿಸಿದೆ. ಪ್ರಸಕ್ತ ಪರೀಕ್ಷಾ ವಿಧಾನಗಳಲ್ಲಿ ಕೋವಿಡ್-19 ಪತ್ತೆಹಚ್ಚಲು ಎರಡು ದಿನಗಳು ಬೇಕಾಗುತ್ತವೆ. ಈಗ ಅದು ಎರಡೂವರೆ ಗಂಟೆಗೂ ಕಡಿಮೆ ಅವಧಿಯಲ್ಲಿ ತಿಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News