ಲಾಕ್‌ಡೌನ್ ಆದೇಶ ಉಲ್ಲಂಘನೆ: ಹಲವರು ವಶಕ್ಕೆ
ಉಡುಪಿ, ಮಾ.27: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಸರಕಾರ ಹೊರಡಿ ಸಿರುವ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ವಿನಾಕಾರಣ ಸಂಚರಿಸುತ್ತಿದ್ದ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ನಗರ ಠಾಣಾ ವ್ಯಾಪ್ತಿಯ ಬ್ರಹ್ಮಗಿರಿ ಜಂಕ್ಷನ್ ಬಳಿ ಮಾ.26ರಂದು ಮಧ್ಯಾಹ್ನ ಬೈಕಿನಲ್ಲಿ ಸಂಚರಿಸುತ್ತಿದ್ದ ಪಂದುಬೆಟ್ಟುವಿನ ಜಯ ಪ್ರಕಾಶ್(22) ಹಾಗೂ ಮಧ್ವನಗರದ ಮಹೇಶ್ (18), ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಮುಖ್ಯ ರಸ್ತೆಯಲ್ಲಿ ಕಾರಿನಲ್ಲಿ ಮಾ.26ರಂದು ಬೆಳಗ್ಗೆ ಸಂಚರಿಸುತ್ತಿದ್ದ ಹೂಡೆಯ ಫಾರೀಸ್ ಹೈದರ್(31), ಅಫ್ವಾನ್ ಬಿ.(25), ತಾಹೀರ್ ಅಬ್ಬಾಸ್(58), ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಜಂಕ್ಷನ್ ಬಳಿ ಮಾ.27ರಂದು ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದ ಉಪ್ಪುಂದ ನಿವಾಸಿ ಶೇಖರ ಪೂಜಾರಿ (35), ಹೆರಂಜಾಲುವಿನ ಜನಾರ್ದನ(26), ಪ್ರಭಾಕರ(32) ಎಂಬವರು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.