ಕಾರ್ಕಳ: ಮದ್ಯ ಸಿಗದ ಚಿಂತೆಯಲ್ಲಿ ಆತ್ಮಹತ್ಯೆ
Update: 2020-03-27 21:45 IST
ಕಾರ್ಕಳ, ಮಾ.27: ಕಳೆದ ಒಂದು ವಾರದಿಂದ ಮದ್ಯ ಸೇವಿಸದ ವಿಚಾರದಲ್ಲಿ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.26 ರಂದು ದುರ್ಗಾ ಗ್ರಾಮದ ತೆಳ್ಳಾರು ಬೆದ್ರಪಲ್ಕೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೆದ್ರಪಲ್ಕೆಯ ನಾಗೇಶ್ ಆಚಾರ್ಯ(37) ಎಂದು ಗುರುತಿಸಲಾಗಿದೆ.
ವಿಪರೀತ ಮದ್ಯಪಾನ ಚಟ ಹೊಂದಿದ್ದ ಇವರು, ಸುಮಾರು ಒಂದು ವಾರದಿಂದ ಮದ್ಯಪಾನ ಮಾಡದ ವಿಚಾರವಾಗಿ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ