ವಲಸೆ ಕಾರ್ಮಿಕರಿಗೆ ರಶೀದ್ ವಿಟ್ಲ ನೇತೃತ್ವದಲ್ಲಿ ಆಹಾರ ಸಾಮಗ್ರಿ ವಿತರಣೆ

Update: 2020-03-28 17:10 GMT

ವಿಟ್ಲ: ಸಮೀಪದ ಕುಡ್ತಮುಗೇರು ಆಟದ ಮೈದಾನದಲ್ಲಿ ಟೆಂಟ್ ಹಾಕಿ ವಾಸವಾಗಿರುವ ಹುಣಸೂರು, ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಭಾಗದ 6 ಕುಟುಂಬದ 21 ಸದಸ್ಯರಿಗೆ ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ವಿಟ್ಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ರೆಡ್ಡಿ ಅವರ ಸೂಚನೆ ಮೇರೆಗೆ ದಿನಸಿ ಸಾಮಗ್ರಿ ವಿತರಿಸಿದೆ. ಇದೀಗಾಗಲೇ ನಾಲ್ಕು ದಿವಸದಲ್ಲಿ ವಿಟ್ಲ ಪರಿಸರದ ಉಕ್ಕುಡ, ಕಾನತ್ತಡ್ಕ, ಬೈರಿಕಟ್ಟೆ, ಕನ್ಯಾನ, ಅಳಿಕೆ, ಕೊಳಂಬೆ, ಮಂಗಳಪದವು, ಕುಡ್ತಮುಗೇರು, ಮಂಕುಡೆ ಮೊದಲಾದ ಪ್ರದೇಶಗಳ ಸುಮಾರು 79 ಅಶಕ್ತ ಕುಟುಂಬಗಳಿಗೆ ಜಾತಿ ಮತ ಬೇಧವಿಲ್ಲದೇ ತಲಾ ಒಂದು ತಿಂಗಳ ರೇಶನ್ ವಿತರಿಸಲಾಗಿದೆ. ಈ ಸೇವೆ ಇನ್ನೂ ಮುಂದುವರಿಯಲಿದ್ದು, ನೌಶೀನ್ ಬದ್ರಿಯಾ ಹಾಗೂ ಇಸಾಕ್ ವಿಟ್ಲ ಸಹಕರಿಸಿದರು ಎಂದು ರಶೀದ್ ವಿಟ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News