ಊರಿಗೆ ಹೋಗಲು 3 ಕಿ.ಮೀ. ಉದ್ದದ ಸಾಲಿನಲ್ಲಿ ಕಾದುನಿಂತ ವಲಸೆ ಕಾರ್ಮಿಕರು

Update: 2020-03-28 18:22 GMT

ಹೊಸದಿಲ್ಲಿ, ಮಾ. 28: ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ ಕಂಗಾಲಾಗಿರುವ ಸಾವಿರಾರು ಮಂದಿ ಉತ್ತರಪ್ರದೇಶ ಹಾಗೂ ಬಿಹಾರಗಳಲ್ಲಿರುವ ತಮ್ಮ ಊರುಗಳಿಗೆ ತೆರಳುವ ಬಸ್‌ಗಳನ್ನು ಹಿಡಿಯುವುದಕ್ಕಾಗಿ ಅನ್ನ, ನೀರಿಲ್ಲದೆ ಕಾದುನಿಂತಿರುವ ದೃಶ್ಯ ಶನಿವಾರ ಹೊಸದಿಲ್ಲಿಯ ಆನಂದ್ ವಿಹಾರ್‌ನಲ್ಲಿರುವ ಅಂತರಾಜ್ಯ ಬಸ್‌ಟರ್ಮಿನಸ್‌ನಲ್ಲಿ ಕಂಡುಬಂದಿತು.

ಮಹಿಳೆಯರು ಸೇರಿದಂತೆ ವಲಸಿಗರು ಕಾರ್ಮಿಕರು ಅರೆಬರೆ ಹೊಟ್ಟೆಯಲ್ಲಿ ಮಕ್ಕಳು ಹಾಗೂ ಬ್ಯಾಗ್‌ಗಳನ್ನು ಹೊತ್ತುಕೊಂಡು 3 ಕಿ.ಮೀ.ನಷ್ಟು ಉದ್ದದ ಕ್ಯೂನಲ್ಲಿ ನಿಂತಿದ್ದರು.

ಉತ್ತರಪ್ರದೇಶ ರಸ್ತೆ ಸಾರಿಗೆ ನಿಗಮವು ವಲಸಿಗ ಕಾರ್ಮಿಕರನ್ನು ಕೊಂಡೊಯ್ಯಲು ಗಾಝಿಯಾಬಾದ್‌ನ ಆನಂದ್ ವಿಹಾರ್ ಟರ್ಮಿನಲ್‌ನಿಂದ ಬಸ್‌ಗಳ ಸಂಚಾರ ಆರಂಭಿಸಿತ್ತು.

‘‘ದಿಲ್ಲಿ ಹಿಂಸಾಚಾರದ ಬಳಿಕ ನಮ್ಮ ಆದಾಯವು ನಿಂತುಹೋಗಿದೆ. ಭಜನ್‌ಪುರ ಪ್ರದೇಶದಲ್ಲಿ ಬಟ್ಟೆ ಅಂಗಡಿಯಲ್ಲಿ ದುಡಿಯುತ್ತಿರುವ ನಿಮಗೆ ಯಾವುದೇ ನಿಗದಿತ ವೇತನವಿಲ್ಲ. ದಿಲ್ಲಿ ಹಿಂಸಾಚಾರದ ನಂತರವಂತೂ ನಮಗೆ ಕೆಲಸವೇ ಇಲ್ಲದಂತಾಗಿದೆ. ಇದೀಗ ಕೊರೋನ ವೈರಸ್ ಹಾವಳಿ ಎದುರಾಗಿದೆ. ನಾವು ಇಲ್ಲಿ ಉಳಿದುಕೊಳ್ಳಲು ಯತ್ನಿಸಿದ್ದೆವಾದರೂ, ನಮ್ಮಲ್ಲಿ ಒಂದಿಷ್ಟೂ ಹಣ ಉಳಿದಿಲ್ಲ. ಇಬ್ಬರು ಮಕ್ಕಳಿರುವ ನಾವು ಬಾಡಿಗೆ ಮನೆಯಲ್ಲಿದ್ದೆವು ಈಗ ನಮ್ಮ ಬಳಿ ಯಾವುದೇ ಹಣ ಅಥವಾ ಆಹಾರ ಉಳಿದಿಲ್ಲ’’

ಉತ್ತರಪ್ರದೇಶದ ಬದೌನ್ ಜಿಲ್ಲೆಯ ತನ್ನ ಗ್ರಾಮಕ್ಕೆ ಮರಳುತ್ತಿರುವ ಕಾರ್ಮಿಕ ನೀರಜ್ ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News