ಗೋವಾ: ಮನೆಬಾಗಿಲಿಗೆ ಅವಶ್ಯಕ ವಸ್ತುಗಳ ಪೂರೈಕೆ

Update: 2020-03-28 19:15 GMT

ಪಣಜಿ,ಮಾ.28: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಮನೆಬಾಗಿಲಿಗೆ ಅತ್ಯವಶ್ಯ ಸಾಮಗ್ರಿಗಳನ್ನು ವಿತರಿಸಲು 2500 ಮಂದಿಗೆ ಸ್ವಯಂಸೇವಕ ಪಾಸ್‌ಗಳನ್ನು ವಿತರಿಸಲಾಗಿದೆಯೆಂದು ಗೋವಾ ಸರಕಾರ ತಿಳಿಸಿದೆ. ಗೋವಾದಲ್ಲಿ ಈವರೆಗೆ ಮೂವರು ಕೋವಿಡ್-19 ರೋಗಿಗಳಿದ್ದಾರೆಂದು ಅದು ಹೇಳಿದೆ.

‘‘ಗೋವಾದ್ಯಂತ ದಿನಸಿ ಅಂಗಡಿಗನ್ನು ಪ್ರತಿ ದಿನವೂ ಹಗಲುರಾತ್ರಿ ತೆರೆದಿಡಲಾಗುವುದು. ಆದರೆ ಇದರ ಜೊತೆಗೆ ಸರಕಾರವು ಮನೆಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯತಂತ್ರವನ್ನು ಕೂಡಾ ಉತ್ತೇಜಿಸುತ್ತಿದೆ. ನಾವು 2500ಕ್ಕೂ ಅಧಿಕ ಸ್ವಯಂಸೇವಕ ಪಾಸ್‌ಗಳನ್ನು ಜಾರಿಗೊಳಿಸಿದ್ದೇವೆ. ಪ್ರತಿಯೊಬ್ಬರು ಮನೆಯಲ್ಲಿಯೇ ಉಳಿದುಕೊಂಡು, ಹೋಂಡೆಲಿವರಿ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು’’ ಎಂದು ಬಯಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News