ಬೀಗಮುದ್ರೆಯು ‘‘ಚುರುಕಿನ ಹಾಗೂ ಮುನ್ನೆಚ್ಚರಿಕೆಯ’’ ಕ್ರಮವಾಗಿತ್ತು: ಕೇಂದ್ರ

Update: 2020-03-28 19:21 GMT

ಹೊಸದಿಲ್ಲಿ, ಮಾ. 28: ಯಾವುದೇ ಪೂರ್ವ ಸಿದ್ಧತೆಗಳನ್ನು ನಡೆಸದೆಯೇ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ರಾಷ್ಟ್ರವ್ಯಾಪಿ ಬೀಗಮುದ್ರೆಯನ್ನು ಘೋಷಿಸಿದರು ಎಂಬ ಟೀಕೆಯನ್ನು ಕೇಂದ್ರ ಸರಕಾರ ಶನಿವಾರ ತಳ್ಳಿಹಾಕಿದೆ. ಪ್ರಧಾನಿಯ ಕ್ರಮವು ‘‘ಚುರುಕಿನ ಹಾಗೂ ಮುನ್ನೆಚ್ಚರಿಕೆಯ’’ ಕ್ರಮವಾಗಿತ್ತು ಎಂದು ಅದು ಬಣ್ಣಿಸಿದೆ.

ಬೀಗಮುದ್ರೆಯ ಬಳಿಕ, ದೇಶದ ಹಲವಾರು ಭಾಗಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಆಹಾರ ಮತ್ತು ಹಣವಿಲ್ಲದೆ ಸಿಕ್ಕಿ ಹಾಕಿಕೊಂಡಿದ್ದು, ಮಾನವೀಯ ಬಿಕ್ಕಟ್ಟು ಎದುರಾಗಿದೆ. ಈ ಕಾರ್ಮಿಕರು ನೂರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಮನೆಗೆ ನಡೆದುಕೊಂಡೇ ಹೋಗುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.

ಜಾಗತಿಕ ಸಾಂಕ್ರಾಮಿಕ ಕೊರೋನವೈರಸ್ ಕಾಣಿಸಿಕೊಂಡ ಬಳಿಕ ತೆಗೆದುಕೊಂಡ ಸರಣಿ ಕ್ರಮಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಹೇಳಿಕೆಯೊಂದರಲ್ಲಿ ಬಿಡುಗಡೆಗೊಳಿಸಿದೆ.

 ಕೋವಿಡ್-19 ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 30ರಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂಬುದಾಗಿ ಘೋಷಿಸುವ ತುಂಬಾ ಹಿಂದೆಯೇ ಕೇಂದ್ರ ಸರಕಾರವು ದೇಶದ ಗಡಿಗಳಲ್ಲಿ ‘ಸಮಗ್ರ ಸ್ಪಂದನೆ ವ್ಯವಸ್ಥೆ’ಯೊಂದನ್ನು ಜಾರಿಗೆ ತಂದಿತ್ತು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News