ಕ್ವಾರಂಟೈನ್‍ನಿಂದ ತಪ್ಪಿಸಿಕೊಂಡು ಮಹಿಳೆಯನ್ನು ಕಚ್ಚಿಕೊಂದ ಯುವಕ !

Update: 2020-03-29 05:06 GMT

ಥೇಣಿ (ತಮಿಳುನಾಡು): ಶ್ರೀಲಂಕಾದಿಂದ ವಾಪಸ್ಸಾಗಿ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬ ದಿಢೀರನೇ ತಪ್ಪಿಸಿಕೊಂಡು, ನೆರೆಮನೆಯ ವೃದ್ಧೆಯನ್ನು ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಕುತ್ತಿಗೆಯಲ್ಲಿ ಕಚ್ಚಿದ ಗಾಯಗಳಾಗಿದ್ದ 80 ವರ್ಷದ ಮಹಿಳೆಯನ್ನು ಶುಕ್ರವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಶನಿವಾರ ಮೃತಪಟ್ಟಿದ್ದಾರೆ.

ಜಕ್ಕಮನಾಯಕನಪಟ್ಟಿಯ ನಿವಾಸಿಯಾಗಿರುವ ಯುವಕ, ಬಟ್ಟೆ ವ್ಯಾಪಾರ ಮಾಡುತಿದ್ದು, ಕ್ವಾರೆಂಟೈನ್ ಗೃಹದಿಂದ ತಪ್ಪಿಸಿಕೊಂಡು ಈ ಕೃತ್ಯ ಎಸಗಿದ ಈತನನ್ನು ಸಾರ್ವಜನಿಕರು ಹಿಡಿದು ಮತ್ತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ, ಶ್ರೀಲಂಕಾದಿಂದ ವಾಪಸ್ಸಾದ ಈತನಿಗೆ ಆರೋಗ್ಯ ಅಧಿಕಾರಿಗಳು ಕ್ವಾರೆಂಟೈನ್‍ಗೆ ಆದೇಶಿಸಿದ್ದರು. ವಿದೇಶಗಳಿಂದ ವಾಪಸ್ಸಾದ ಎಲ್ಲರಿಗೂ ಇದನ್ನು ಕಡ್ಡಾಯಪಡಿಸಲಾಗಿದೆ.

ಶುಕ್ರವಾರ ಸಂಜೆ ಕ್ವಾರೆಂಟೈನ್‍ನಿಂದ ತಪ್ಪಿಸಿಕೊಂಡು, ತನ್ನ ಬಟ್ಟೆ ಕಳಚಿಕೊಂಡು ಬೀದಿಗಳಲ್ಲಿ ಓಡಲಾರಂಭಿಸಿದ. ಇದರಿಂದ ಆಘಾತಗೊಂಡ ಆತನ ತಂದೆ ಹಾಗೂ ಕುಟುಂಬದವರು ಆತನನ್ನು ನಚಿಯಮ್ಮಲ್‍ನಲ್ಲಿ ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ಇದಕ್ಕೂ ಮುನ್ನ ಆರೋಪಿ, ಪಕ್ಕದ ಮನೆಯಲ್ಲಿ ಕುಳಿತಿದ್ದ ವೃದ್ಧೆಯ ಕತ್ತನ್ನು ಕಚ್ಚಿದ್ದ. ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News