ದಿಲ್ಲಿಯಿಂದ 326 ಕಿ.ಮಿ.ದೂರದ ಊರಿಗೆ ಕಾಲ್ನಡಿಗೆಯಲ್ಲಿ ಹೊರಟ ವ್ಯಕ್ತಿ ಕುಸಿದು ಬಿದ್ದು ಸಾವು

Update: 2020-03-29 05:47 GMT

ಆಗ್ರಾ, ಮಾ.29: ಕರೋನವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ಘೋಷಿಸಿದ ನಂತರ ಮಧ್ಯಪ್ರದೇಶದ ತಮ್ಮ ಮನೆಗೆ ತಲುಪಲು ದಿಲ್ಲಿಯಿಂದ 200 ಕಿ.ಮೀ ದೂರದಲ್ಲಿ ನಡೆದು ಬಂದ 38 ವರ್ಷದ ವ್ಯಕ್ತಿ ದಾರಿಯಲ್ಲಿ ಸಾವನ್ನಪ್ಪಿದ್ದಾನೆ.

ದಿಲ್ಲಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ರಣವೀರ್ ಸಿಂಗ್ ಅವರು  ಉದ್ಯೋಗ, ಆಶ್ರಯ ಅಥವಾ ಹಣವಿಲ್ಲದೆ ಉಳಿದ ನಂತರ ರಾಷ್ಟ್ರ ರಾಜಧಾನಿಯಿಂದ 326 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತಮ್ಮ ಗ್ರಾಮಕ್ಕೆ  ಊರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು.

246 ಕಿ.ಮಿ ದೂರವನ್ನು  ಕಾಲ್ನಡಿಗೆಯಲ್ಲೇ ತಲುಪಿದ್ದರು. ಇನ್ನು ಊರು  ತಲುಪಲು 80 ಕಿ.ಮೀ ಸಾಗಿದ್ದರೆ ಊರು ತಲುಪುತ್ತಿದ್ದರು.  ಆದರೆ ಪ್ರಯಾಣ ಮುಂದುವರಿಸಲಾರದೆ  ಉತ್ತರ ಪ್ರದೇಶದ ಆಗ್ರಾದ ಹೆದ್ದಾರಿಯಲ್ಲಿ ಅವರು ಕುಸಿದುಬಿದ್ದಿದ್ದಾರೆ ,  ಇದನ್ನು ನೋಡಿದ ಸ್ಥಳೀಯ ಅಂಗಡಿಯವನು ಅವರಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಿದ್ದಾರೆ. ಆದರೆ ರಣವೀರ್ ಸಿಂಗ್  ಹೃದಯಾಘಾತದಿಂದ  ಸಾವನ್ನಪ್ಪಿದರು.

ಸಾವಿರಾರು ವಲಸಿಗರು ತಮ್ಮ  ಊರಿಗೆ  ಮರಳಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಕೋವಿಡ್ -19 ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಯಾಣಿಕರ ರೈಲುಗಳು ಮತ್ತು ಅಂತರ್ ರಾಜ್ಯ ಬಸ್ಸುಗಳು ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳು ಸ್ಥಗಿತಗೊಂಡಿರುವುದರಿಂದ  ವಲಸಿಗರು ಕಾಲ್ನಡಿಗೆಯನ್ನೇ ಅವಲಂಭಿಸುವಂತಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News