ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ದಿನಕ್ಕೆ 4 ಬಾರಿ ಕೊರೋನ ಜಾಗೃತಿ
Update: 2020-03-29 17:24 IST
ಮಂಗಳೂರು: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈ ಕುರಿತ ಮುಂಜಾಗ್ರತಾ ಕ್ರಮಗಳನ್ನು ರಾಜ್ಯದ ಎಲ್ಲ ಮಸೀದಿ ಧ್ವನಿವರ್ಧಕಗಳಲ್ಲಿ ಪ್ರಕಟಿಸಲು ಮಸೀದಿಗಳ ಆಡಳಿತ ಸಮಿತಿಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ ನೀಡಿದ್ದಾರೆ.
ಮಸೀದಿ ಆಡಳಿತ ಮಂಡಳಿಗೆ ನೀಡಲಾಗುವ ಅಧಿಕೃತ ತ್ರಿಭಾಷಾ ಆಡಿಯೋ ಕ್ಲಿಪ್ ಅನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ, ಸಂಜೆ 4 ಗಂಟೆಗೆ, ಸಂಜೆ 6 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ಪ್ರಕಟಿಸಬೇಕು ಎಂದು ಸೂಚನೆ ನೀಡಲಾಗಿದೆ.