ಕೊರೋನ ಭೀತಿ: ಮಾವಿನ ಮರದ ಮೇಲೆ 7 ಕಾರ್ಮಿಕರ ಕ್ವಾರಂಟೈನ್ !

Update: 2020-03-29 12:11 GMT
Photo: indianexpress.com

ಪಶ್ಚಿಮ ಬಂಗಾಳ: ಚೆನ್ನೈಯಿಂದ ಇತ್ತೀಚೆಗಷ್ಟೇ ಮರಳಿ ತಮ್ಮ ತವರೂರಾದ ಇಲ್ಲಿನ ಪುರುಲಿಯಾ ಜಿಲ್ಲೆ ತಲುಪಿದ್ದ 7 ಕಾರ್ಮಿಕರು 14 ದಿನಗಳ ಕಾಲ ಮಾವಿನ ಮರದ ಮೇಲೆ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ತಮ್ಮ ಮನೆಗಳಲ್ಲಿ ಯಾವುದೇ ಹೆಚ್ಚುವರಿ ಕೋಣೆ ಇಲ್ಲದ ಕಾರಣ ಕಾರ್ಮಿಕರು ಮಾವಿನ ಮರವನ್ನು ಆಶ್ರಯಿಸಬೇಕಾಗಿದೆ.

ಚೆನ್ನೈಯಿಂದ ಮರಳಿದಾಕ್ಷಣ ಈ ಕಾರ್ಮಿಕರು ವೈದ್ಯರನ್ನು ಭೇಟಿಯಾಗಿದ್ದು, ಅವರು ಹೋಮ್ ಕ್ವಾರಂಟೈನ್ ನಲ್ಲಿರಲು ಸೂಚನೆ ನೀಡಿದ್ದರು.

"ನಾವು ಚೆನ್ನೈಯಿಂದ ಮರಳಿದ್ದೆವು. ನಾವು ಇಲ್ಲಿ ಚೆನ್ನಾಗಿದ್ದೇವೆ. ಬೆಳಗ್ಗೆ ನಮಗೆ ಉಪಹಾರ ನೀಡಲಾಗುತ್ತದೆ. ಇಲ್ಲಿ ನೀರೂ ಲಭ್ಯವಿದೆ" ಎಂದು ಕಾರ್ಮಿಕರಲ್ಲೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News