×
Ad

ಕಾಸರಗೋಡು : ಇಂದು ಏಳು ಮಂದಿಯಲ್ಲಿ ಕೊರೋನ ಸೋಂಕು ದೃಢ

Update: 2020-03-29 18:26 IST

ಕಾಸರಗೋಡು : ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು,  ರವಿವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಕಿತರೆಲ್ಲರೂ ವಿದೇಶದಿಂದ ಬಂದವರು ಎಂದು ತಿಳಿದುಬಂದಿದೆ.

ಶನಿವಾರ ಒಂದು ಪ್ರಕರಣ ಮಾತ್ರ ದೃಢಪಟ್ಟಿದ್ದರೆ. ಇಂದು 7 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89 ಕ್ಕೇರಿದೆ. ಕೇರಳದಲ್ಲಿ ಇಂದು 20 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕಾಸರಗೋಡು 7, ಕಣ್ಣೂರು 8 , ತಿರುವನಂತಪುರ, ತ್ರಿಶೂರು, ಪಾಲಕ್ಕಾಡ್ , ಮಲಪ್ಪುರಂ ಜಿಲ್ಲೆಗಳ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಈ ಪೈಕಿ 18 ಮಂದಿ ವಿದೇಶದಿಂದ ಬಂದವರು. ಕೇರಳದಲ್ಲಿ 202 ಮಂದಿಯಲ್ಲಿ  ಸೋಂಕು ದೃಢಪಟ್ಟಿದ್ದು, 181 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News