ಕೊರೋನವೈರಸ್‌ ಸವಾಲಿಗೆ ತತ್ತರಿಸಿ ಜರ್ಮನಿಯ ರಾಜ್ಯ ಹಣಕಾಸು ಸಚಿವ ಆತ್ಮಹತ್ಯೆ

Update: 2020-03-29 16:06 GMT

ಫ್ರಾಂಕ್‌ಫರ್ಟ್ (ಜರ್ಮನಿ), ಮಾ. 29: ನೂತನ-ಕೊರೋನವೈರಸ್ ಒಡ್ಡಿರುವ ಆರ್ಥಿಕ ಸವಾಲುಗಳನ್ನು ಹೇಗೆ ನಿಭಾಯಿಸುವುದು ಎನ್ನುವ ಚಿಂತೆಯಲ್ಲಿ ಜರ್ಮನಿಯ ಹೆಸ್ಸಿ ರಾಜ್ಯದ ಹಣಕಾಸು ಸಚಿವ ಥಾಮಸ್ ಶೇಫರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯದ ಪ್ರೀಮಿಯರ್ ವೋಕರ್ ಬೌಫಿಯರ್ ರವಿವಾರ ತಿಳಿಸಿದ್ದಾರೆ.

54 ವರ್ಷದ ಶೇಫರ್‌ರ ಶವ ಶನಿವಾರ ರೈಲು ಹಳಿಯೊಂದರ ಸಮೀಪ ಪತ್ತೆಯಾಯಿತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾವು ಭಾವಿಸಿದ್ದೇವೆ ಎಂದು ವೀಸ್‌ಬ್ಯಾಡನ್ ಪ್ರಾಸಿಕ್ಯೂಶನ್ ಕಚೇರಿ ಹೇಳಿದೆ.

ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನ ಕೇಂದ್ರ ಸ್ಥಳ ಹೆಸ್ಸಿ ಆಗಿದೆ. ಅಲ್ಲಿ ಡಾಶ್ ಬ್ಯಾಂಕ್ ಮತ್ತು ಕಾಮರ್ಸ್‌ ಬ್ಯಾಂಕ್ ಮುಂತಾದ ಪ್ರಮುಖ ಬ್ಯಾಂಕ್‌ಗಳ ಪ್ರಧಾನ ಕಚೇರಿಗಳಿವೆ.

ಹತ್ತು ವರ್ಷಗಳಿಂದ ಹೆಸ್ಸಿ ರಾಜ್ಯದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕೊರೋನವೈರಸ್‌ನ ಆರ್ಥಿಕ ಪರಿಣಾಮಗಳೊಂದಿಗೆ ವ್ಯವಹರಿಸುವಲ್ಲಿ ಕಂಪೆನಿಗಳು ಮತ್ತು ಉದ್ಯೋಗಿಗಳಿಗೆ ನೆರವಾಗಲು ‘ಹಗಲಿರುಳು’ ಕೆಲಸ ಮಾಡುತ್ತಿದ್ದರು ಎಂದು ಪ್ರೀಮಿಯರ್ ಬೌಫಿಯರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News